ರಾಜ್ಯರೈಲ್ವೆ ಹಳಿ ಪಕ್ಕ ನಕಲಿ 3 ಮಿಲಿಯನ್ ಡಾಲರ್ ಕರೆನ್ಸಿ ಪತ್ತೆ ಪ್ರಕರಣ: ಚಿಂದಿ ಆಯುವವನ ಮೇಲೆ ಹಲ್ಲೆ ಮಾಡಿ ಅಪಹರಣ
ನಕಲಿ ಎಂದು ಹೇಳಲಾದ 3 ಮಿಲಿಯನ್ ಡಾಲರ್ ಮೌಲ್ಯದ 23 ನೋಟುಗಳ ಕಟ್ಟುಗಳ ಪ್ಲಾಸ್ಟಿಕ್ ಚೀಲ, ವಿಶ್ವಸಂಸ್ಥೆಯ (United Nations) ಪತ್ರವು ಸ್ಕ್ರ್ಯಾಪ್ ಡೀಲರ್ ನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ದುಷ್ಕರ್ಮಿಗಳು ಆತನನ್ನು ಅಪಹರಿಸಿ ಅಮಾನುಷವಾಗಿ ಥಳಿಸಿ ರೈಲ್ವೆ ಹಳಿಯಲ್ಲಿ ಸಿಕ್ಕ ಹಣವನ್ನು ತಮಗೆ ನೀಡುವಂತೆ ಒತ್ತಡ ಹಾಕಿದರು.