ವಿಜ್ಞಾನ-ತಂತ್ರಜ್ಞಾನಕೊವಿಡ್-19 ನಕಲಿ ಸುದ್ದಿ ಪತ್ತೆ ಹಚ್ಚುವ ಚಾಟ್ ಬಾಟ್ ಕಂಡುಹಿಡಿದ ಬೆಂಗಳೂರು ಯುವಕ!
ಹೊಸ-ಯುಗದ ಅಂತರ್ಜಾಲ ವ್ಯಾಪಕ ಪ್ರಮಾಣದ ಮಾಹಿತಿ ಪ್ರಸಾರಕ್ಕೆ ಸಾಕ್ಷಿಯಾಗಿದ್ದರೂ, ಕೆಲವು ನಕಲಿ ಸುದ್ದಿಗಳು ಮತ್ತು ಪರಿಶೀಲಿಸದ ಮೂಲಗಳಿಂದ ಬರುವ ಮಾಹಿತಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ಇತ್ತೀಚಿಗೆ ನಕಲಿ ಸುದ್ದಿಗಳ ಹಾವಳಿ ಹೆಚ್ಚುತ್ತಿದ್ದು, ಇದಕ್ಕೆ ಬ್ರೇಕ್ ಹಾಕಲು ಬೆಂಗಳೂರಿನ ಯುವಕ ಯಶ್ ಜೈಸ್ವಾಲ್ ಅವರು ಚಾಟ್ ಬಾಟ್ ಎಂಬ ಹೊಸ ತಂತ್ರಜ್ಞಾನ ಕಂಡುಹಿಡಿದಿದ್ದಾರೆ.