ರಾಜ್ಯಚರ್ಮ ಕುಶಲಕರ್ಮಿಗಳಿಗೆ 5000 ರೂ. ಪರಿಹಾರದ ವಿಶೇಷ ಪ್ಯಾಕೇಜ್: ರಾಜ್ಯ ಸರ್ಕಾರ ಘೋಷಣೆ
ಕೋವಿಡ್ 19 ಲಾಕ್ಡೌನ್ ಪರಿಣಾಮವಾಗಿ ತೊಂದರೆಗೆ ಸಿಲುಕಿರುವ ರಸ್ತೆ ಬದಿಯಲ್ಲಿ ಚರ್ಮಗಾರಿಕೆ ವೃತ್ತಿ ಮಾಡುತ್ತಿರುವ ರಾಜ್ಯ 11,772 ಚರ್ಮ ಕುಶಲಕರ್ಮಿಗಳಿಗೆ ಒಂದು ಬಾರಿ ಪರಿಹಾರ ರೂ.5000 ಗಳಂತೆ 5.89 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ನೀಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.