ರಾಜ್ಯವಿಶ್ವ ಅಂಚೆ ಕಾರ್ಡ್ ದಿನಾಚರಣೆ: 'ಸಾಂಪ್ರದಾಯಿಕ ಗೊಂಬೆಗಳ ವಿಶೇಷ ಅಂಚೆ ಲಕೋಟೆ'ಯಲ್ಲಿ ಚನ್ನಪಟ್ಟಣ ಗೊಂಬೆಗೆ ಸ್ಥಾನ!
ಭಾರತವನ್ನು ಜಾಗತಿಕ ಆಟಿಕೆ ಕೇಂದ್ರವನ್ನಾಗಿ ಮಾಡುವಂತೆ ಉದ್ಯಮಿಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದಂತೆಯೇ ಇದಕ್ಕೆ ಅನುಗುಣವಾಗಿ ಪೋಸ್ಟ್ ಕ್ರಾಸಿಂಗ್ ಸೊಸೈಟಿ ಆಫ್ ಇಂಡಿಯಾ ಚನ್ನಪಟ್ಟಣ ಸೇರಿದಂತೆ 12 ರಾಜ್ಯಗಳ ಟ್ರೇಡ್ಮಾರ್ಕ್ ಆಟಿಕೆಗಳನ್ನು ಒಳಗೊಂಡ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲು ಸಿದ್ಧತೆಗಳನ್ನು ನಡೆಸಿದೆ.