ರಾಜ್ಯಗ್ರಾಮೀಣ ನೀರು ಸರಬರಾಜು ಕಾರ್ಯಕ್ರಮಕ್ಕಾಗಿ ಕರ್ನಾಟಕಕ್ಕೆ 363 ಮಿಲಿಯನ್ ಡಾಲರ್ ಸಾಲ; ವಿಶ್ವಬ್ಯಾಂಕ್ ಅನುಮೋದನೆ!
ವಿಶ್ವಬ್ಯಾಂಕ್ನ ಕಾರ್ಯನಿರ್ವಾಹಕ ಮಂಡಳಿಯು ಕರ್ನಾಟಕಕ್ಕೆ 363 ಮಿಲಿಯನ್ ಡಾಲರ್ ಸಾಲವನ್ನು ಅನುಮೋದಿಸಿದೆ. ಇದರಿಂದ ರಾಜ್ಯದ ಎರಡು ಮಿಲಿಯನ್ ಗ್ರಾಮೀಣ ಕುಟುಂಬಗಳಿಗೆ ಕೊಳವೆ ನೀರಿನ ಸಂಪರ್ಕದ ಮೂಲಕ ಅವರ ಮನೆಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಅನುಕೂಲವಾಗಲಿದೆ.