ದೇಶಮಧ್ಯಪ್ರದೇಶ: ಇಬ್ಬರು ಗ್ರಾಮಸ್ಥರನ್ನು ಅಪಹರಿಸಿ, ಹತ್ಯೆಗೈದ ನಕ್ಸಲೀಯರು!
ಪೊಲೀಸ್ ಮಾಹಿತಿದಾರರು ಎಂಬ ಅನುಮಾನದಿಂದ ಶಸ್ತ್ರ ಸಜ್ಜಿತ ನಕ್ಸಲೀಯರು ಇಬ್ಬರು ಗ್ರಾಮಸ್ಥರನ್ನು ಅಪಹರಿಸಿ, ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ನಕ್ಸಲ್ ಪೀಡಿತ ಬಾಲ್ಗಟ್ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಕಳೆದ ವರ್ಷ ಮಹಿಳಾ ನಕ್ಸಲ್ ಒಬ್ಬರನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ್ದರು.