ರಾಜ್ಯದತ್ತ ಪೀಠ ಪ್ರಕರಣ ಮತ್ತೆ ಮುನ್ನೆಲೆಗೆ: ಗೋರಿಗಳಿಗೆ ಹಾನಿ ಮಾಡಿದ್ದ 14 ಮಂದಿಗೆ ಸಮನ್ಸ್ ಜಾರಿ!
2017ರಲ್ಲಿ ದತ್ತ ಜಯಂತಿ ಆಚರಣೆ ವೇಳೆ ದತ್ತಪೀಠ ಆವರಣದಲ್ಲಿದ್ದ ಗೋರಿಗಳ ಧ್ವಂಸ ಮಾಡಿದ ಆರೋಪ ಹೊತ್ತಿರುವ 14 ಮಂದಿ ಹಿಂದೂ ಕಾರ್ಯಕರ್ತರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದು, ಈ ಮೂಲಕ ದತ್ತಪೀಠ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.