ಗೋಪಾಲಯ್ಯ

ಮಾಜಿ ಸಚಿವ ಗೋಪಾಲಯ್ಯ ವಿರುದ್ಧದ ಅಬಕಾರಿ ಪ್ರಕರಣ: ಲೋಕಾಯುಕ್ತ ಪೊಲೀಸರಿಗೆ ಕೋರ್ಟ್ ತರಾಟೆ, ಮರು ತನಿಖೆಗೆ ಆದೇಶ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಬಕಾರಿ ಸಚಿವರಾಗಿದ್ದ ಅವಧಿಯಲ್ಲಿ 2 ಲಕ್ಷ ಮೆಟ್ರಿಕ್ ಟನ್‌ನಷ್ಟು ಕಾಕಂಬಿಯನ್ನು ನಿಯಮಬಾಹಿರವಾಗಿ ರಫ್ತು ಮಾಡಲು ಅನುಮತಿ ನೀಡಿದ್ದ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತಿರಸ್ಕರಿಸಿದೆ.

ಹಣ ಕೊಡದಿದ್ದರೆ ವಿಧಾನ ಸೌಧಕ್ಕೆ ಹೋಗುವಾಗ ಕೊಲ್ತೀನಿ: ಮಾಜಿ ಕಾರ್ಪೋರೇಟರ್ ನಿಂದ ಶಾಸಕ ಗೋಪಾಲಯ್ಯಗೆ ಬೆದರಿಕೆ ಕರೆ!
ವಿಧಾನಸೌಧಕ್ಕೆ ಹೋಗುವಾಗ ಕೊಲ್ತೀನಿ, ಇಲ್ಲ ಮನೆಯೊಳಗೆ ಬಂದು ಕೊಲೆ ಮಾಡ್ತೀನಿ ಎಂದು ಬಿಜೆಪಿ ಶಾಸಕ ಗೋಪಾಲಯ್ಯಗೆ ಮಾಜಿ ಕಾರ್ಪೊರೇಟರ್ ಪದ್ಮರಾಜ್ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಜೆಪಿ ಬಿಡುವ ಪ್ರಮೇಯವಿಲ್ಲ, ಕನಸಿನಲ್ಲೂ ಕಾಂಗ್ರೆಸ್ ಸೇರುವ ಯೋಚನೆ ಮಾಡಿಲ್ಲ: ಗೋಪಾಲಯ್ಯ
ಬಿಜೆಪಿ ಸಿದ್ಧಾಂತ, ನಾಯಕರನ್ನು ನಂಬಿಯೇ ಪಕ್ಷ ಸೇರ್ಪಡೆಯಾಗಿದ್ದೇನೆ. ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ಪ್ರಮೇಯವೇ ಇಲ್ಲ. ಈಗ ಕೇಳಿ ಬರುತ್ತಿರುವ ಸುದ್ದಿಗಳು ಕೇವಲ ವದಂತಿ ಎಂದು ಶಾಸಕ ಕೆ.ಗೋಪಾಲಯ್ಯ ಹೇಳಿದ್ದಾರೆ.

ಸೋಲಿನ ಭಯದಿಂದ ಕ್ಷೇತ್ರ ಬದಲಾಯಿಸಲು ಸಿದ್ದರಾಮಯ್ಯ ನಿರ್ಧಾರ: ಸಚಿವ ಗೋಪಾಲಯ್ಯ
2023ರ ವಿಧಾನಸಭಾ ಚುನಾವಣೆಗೆ ಸೋಲಿನ ಭಯದಿಂದ ಕ್ಷೇತ್ರವನ್ನು ಬದಲಾಯಿಸಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ಅಬಕಾರಿ ಸಚಿವ ಗೋಪಾಲಯ್ಯ ಸೋಮವಾರ ಹೇಳಿದ್ದಾರೆ.

ಸಂಘ ಪರಿವಾರದವರ ಮನೆಗೆ ತೆರಳಲು ಸಚಿವರಿಗೆ ಸೂಚನೆ: ಗೋಪಾಲಯ್ಯ
ಸಚಿವರುಗಳಿಗೆ ಪ್ರತಿದಿನ ಜಿಲ್ಲೆಗಳಿಗೆ ಭೇಟಿ ನೀಡಿ, ಬಿಜೆಪಿ ಕಾರ್ಯಾಲಯಕ್ಕೆ ತೆರಳಿ ಕಾರ್ಯಕರ್ತರ ಅಹವಾಲು ಸ್ವೀಕಾರ ಮಾಡುವುದು ಸೇರಿದಂತೆ ಸಂಘ ಪರಿವಾರದವರ ಮನೆಗೆ ಭೇಟಿ ಮಾಡಲು ನಮ್ಮ ರಾಷ್ಟ್ರೀಯ ಅಧ್ಯಕ್ಷರು....

ಸಚಿವರುಗಳ ಭಿನ್ನಾಭಿಪ್ರಾಯ ಬಗೆಹರಿಸುವ ಸಾಮರ್ಥ್ಯ ಯಡಿಯೂರಪ್ಪ ಅವರಿಗಿದೆ: ಗೋಪಾಲಯ್ಯ
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಚರ್ಚೆ ನಡೆದಿಲ್ಲ, ಸಿಎಂ ಯಡಿಯೂರಪ್ಪ ತಮ್ಮ ಅಧಿಕಾರವಧಿಯನ್ನೂ ಪೂರ್ಣಗೊಳಿಸುತ್ತಾರೆ ಎಂದು ಸಚಿವ ಕೆ ಗೋಪಾಲಯ್ಯ ಹೇಳಿದ್ದಾರೆ.

ಈ ಬಾರಿ ಸಾರ್ವಜನಿಕರಿಗೆ ಹಾಸನಾಂಬೆ ದರ್ಶನವಿಲ್ಲ: ವಿವಿಐಪಿಗಳಿಗೆ ಮಾತ್ರ ಅವಕಾಶ- ಸಚಿವ ಗೋಪಾಲಯ್ಯ
ಕೊರೋನಾ ಸೋಂಕು ತೀವ್ರತೆ ಹಿನ್ನೆಲೆಯಲ್ಲಿ ಈ ಬಾರಿ ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸ್ಪಷ್ಟಪಡಿಸಿದ್ದಾರೆ.

ಪಡಿತರ ಅಕ್ರಮ ತಡೆಯಲು ರಾಜ್ಯ ಮಟ್ಟದಲ್ಲಿ ಜಾಗೃತ ದಳ ರಚನೆ: ಗೋಪಾಲಯ್ಯ
ಪಡಿತರ ಅಕ್ರಮ ತಡೆಯುವ ನಿಟ್ಟಿನಲ್ಲಿ ರಾಜ್ಯ ಮಟ್ಟದಲ್ಲಿ ಜಾಗೃತ ದಳ ರಚನೆ ಮಾಡಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ

ಸರ್ಕಾರಕ್ಕೆ ಕೆಟ್ಟ ಹೆಸರು ತರಲು ದುಷ್ಟ ಶಕ್ತಿಗಳ ಪೂರ್ವ ನಿಯೋಜಿತ ಕೃತ್ಯ: ಗೋಪಾಲಯ್ಯ
ಸರ್ಕಾರಕ್ಕೆ ಕೆಟ್ಟ ಹೆಸರು ಕೆಲವು ದುಷ್ಟ ಶಕ್ತಿಗಳು ತರಲು ಗಲಭೆ ಮಾಡುತ್ತಿದ್ದು, ಬೆಂಗಳೂರಿನ ಘಟನೆ ಪೂರ್ವ ನಿಯೋಜಿತ ಗಲಭೆಯಂತೆ ಕಾಣುತ್ತಿದೆ ಎಂದು ಸಚಿವ ಗೋಪಾಲಯ್ಯ ಆತಂಕ ವ್ಯಕ್ತಪಡಿಸಿದ್ದಾರೆ

