ರಾಜಕೀಯಕಾಂಗ್ರೆಸ್ ನ ಮೇಕೆದಾಟು ಯಾತ್ರೆ ವೇಳೆ ಕೋವಿಡ್ ನಿಯಮ ಮೀರಿದರೆ ಕಾನೂನು ಕ್ರಮ, ಇಲ್ಲಿ ಅನುಮತಿಯ ಪ್ರಶ್ನೆಯೇ ಇಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ
ರಾಜ್ಯದಲ್ಲಿ ಕೋವಿಡ್ ನಿಯಮ ಸಾರ್ವಜನಿಕರಿಗೊಂದು, ರಾಜಕೀಯ ನಾಯಕರಿಗೊಂದು, ಗಣ್ಯರಿಗೊಂದು ಎಂದು ಇಲ್ಲ, ಎಲ್ಲರಿಗೂ ಒಂದೇ, ಬಿಗಿಯಾದ ಕ್ರಮ ತೆಗೆದುಕೊಳ್ಳಲಾಗುತ್ತದೆ. 2ನೇ ಕೋವಿಡ್ ಅಲೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕೇಸು ಬಿದ್ದಿತ್ತು.ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಮೇಕೆದಾಟು ಪಾದಯಾತ್ರೆ ಸಮಯದಲ್ಲಿ ನಿಯಮ ಮೀರಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವ