ವಿದೇಶಗೂಢಚಾರಿಕೆ ಆರೋಪ: ಪಾಕ್ ರಾಯಭಾರ ಕಚೇರಿ ಇಬ್ಬರು ಸಿಬ್ಬಂದಿ ಗಡಿಪಾರು ಬೆನ್ನಲ್ಲೆ ಭಾರತೀಯ ರಾಯಭಾರಿಗೆ ಸಮನ್ಸ್!
ಭಾರತದ ವಿರುದ್ಧ ಗೂಢಚಾರಿಕೆ ಮಾಡುತ್ತಿದ್ದ ಆರೋಪದ ಮೇಲೆ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮೀಷನ್ ಕಚೇರಿಯಲ್ಲಿನ ಇಬ್ಬರು ಅಧಿಕಾರಿಗಳನ್ನು ಗಡೀಪಾರು ಮಾಡಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳ ಪಾಕಿಸ್ತಾನ ಸಮನ್ಸ್ ಜಾರಿ ಮಾಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ.