ದೇಶಗುಳ್ಳೆಗಳು ನಮ್ಮನ್ನು ತಡೆಯುವುದಿಲ್ಲ, ನಾವು ಭಾರತವನ್ನು ಒಂದುಗೂಡಿಸುತ್ತೇವೆ: ರಾಹುಲ್ ಗಾಂಧಿ
ಎಡಬಿಡದೆ ಸುರಿಯುತ್ತಿರುವ ಮಳೆ ಮತ್ತು ಸಾರ್ವಜನಿಕರ ದಟ್ಟಣೆಯ ನಡುವೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ಕೇರಳದಲ್ಲಿ ಮಂಗಳವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಮಳೆ ಬರುತ್ತಿದ್ದರೂ ಕೂಡ, ಛತ್ರಿಯಿಲ್ಲದೆ ರಾಹುಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಮತ್ತು ಹಲವಾರು ಬೆಂಬಲಿಗರು ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.