ದೇಶವರುಣನ ಕೃಪೆಗಾಗಿ ವಿಚಿತ್ರ ಆಚರಣೆ: ಕತ್ತೆಗಳಿಗೆ ಜಾಮೂನು ತಿನ್ನಿಸಿ ಸಂಭ್ರಮಿಸಿದ ಜನ!
ಮಧ್ಯಪ್ರದೇಶದ ಮಂಡ್ಸೌರ್ ಜಿಲ್ಲೆಯ ಹಲವು ಭಾಗಗಳಲ್ಲಿ ಇನ್ನೂ ಸರಿಯಾಗಿ ಮಳೆ ಆರಂಭವಾಗದ ಕಾರಣ ಜನರು ಬರಗಾಲ ಬಾರದೇ ಇರಲು ಕತ್ತೆಗಳಿಗೆ ಮದುವೆ ಮಾಡಿಸಿದ್ದಾರೆ. ಇದಾದ ಕೆಲ ದಿನಗಳಿಗೆ ಪ್ರದೇಶದ ಸುತ್ತಮುತ್ತ ಭಾರೀ ಮಳೆಯಾಗಿದ್ದು, ಕತ್ತೆಗಳಿಗೆ ಗುಲಾಬ್ ಜಾಮೂನು ತಿನ್ನಿಸುವ ಮೂಲಕ ಸಂಭ್ರಮಿಸಿದ್ದಾರೆ.