ದೇಶಸಮಾಧಾನಕರ ಸಂಗತಿ: ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಶೇ.10.03ರಿಂದ ಶೇ.7.72ಕ್ಕೆ ಇಳಿಕೆ
ಕೋವಿಡ್-19ಗೆ ಒಳಗಾಗುತ್ತಿರುವ ಹೊಸ ಸೋಂಕಿತ ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಕಳೆದ ಆಗಸ್ಟ್ 13ರಿಂದ ಕಡಿಮೆಯಾಗುತ್ತಿದೆ. ಹಾಗೆಂದು ಎಚ್ಚರ ತಪ್ಪುವುದು ಸರಿಯಲ್ಲ, ಕೇವಲ 5 ದಿನಗಳ ಅಂಕಿಅಂಶದಿಂದ ಕೊರೋನಾ ಸೋಂಕು ಕಡಿಮೆಯಾಗಿದೆ, ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.