ರಾಜ್ಯಗುಣಮಟ್ಟವಿಲ್ಲದ ಮಾರ್ಬಲ್ ಪೂರೈಕೆ: 18.28 ಲಕ್ಷ ರೂ. ಪಾವತಿಸುವಂತೆ ರಾಜಸ್ಥಾನ ಮೂಲದ ಕಂಪನಿಗೆ ಗ್ರಾಹಕ ಆಯೋಗ ನಿರ್ದೇಶನ
ಕಳಪೆ ಮತ್ತು ಗುಣಮಟ್ಟವಿಲ್ಲದ ಮಾರ್ಬಲ್ ಗಳನ್ನು ಪೂರೈಸಿದ್ದಕ್ಕಾಗಿ ನಗರದ ನಿವಾಸಿಯೊಬ್ಬರಿಗೆ 10. 10 ಲಕ್ಷ ರೂಪಾಯಿ ಪರಿಹಾರ ಸೇರಿದಂತೆ ಒಟ್ಟಾರೇ 18.28 ಲಕ್ಷ ರೂಪಾಯಿ ಪಾವತಿಸುವಂತೆ ರಾಜಸ್ಥಾನ ಮೂಲದ ಆರ್ ಕೆ ಮಾರ್ಬಲ್ ಪ್ರೈವೇಟ್ ಲಿಮಿಟೆಡ್ ಗೆ (ಆರ್ ಕೆಎಂಪಿಎಲ್ )ಬೆಂಗಳೂರು ಗ್ರಾಮಾಂತರ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವಿವಾದ ಪರಿಹಾರ ಆಯೋಗ ನಿರ್ದೇಶನ ನೀಡಿದೆ