ದೇಶಬಿಹಾರದ ಸರನ್ ಜಿಲ್ಲೆಯಲ್ಲಿ ಸಿಕ್ಕಿಹಾಕಿಕೊಂಡ ಗಂಗಾ ವಿಲಾಸ್ ಕ್ರೂಸ್: ಸುದ್ದಿ ನಿರಾಕರಿಸಿದ ಸರ್ಕಾರ
ಕಳೆದ ವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದ ಗಂಗಾ ವಿಲಾಸ್ ಕ್ರೂಸ್ ಬಿಹಾರದ ಸರನ್ ಜಿಲ್ಲೆಯ ಗಂಗಾ ನದಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ಗಂಗಾ ವಿಲಾಸ್ ಕ್ರೂಸ್ ತನ್ನ 51 ದಿನಗಳ ಪ್ರಯಾಣವನ್ನು ಶನಿವಾರ ಆರಂಭಿಸಿತ್ತು. ಮೂರನೇ ದಿನವಾದ ನಿನ್ನೆ ಸೋಮವಾರ ಸಿಕ್ಕಿಹಾಕಿಕೊಂಡಿದ್ದು ನದಿಯಲ್ಲಿ ಆಳವಾಗಿ ನೀರಿಲ್ಲದ ಕಾರಣ ದಡದಲ್ಲಿ ಕಟ್ಟಿಹಾಕಲು ಸಾಧ್ಯವಾಗಲಿಲ್ಲ