ಸಿನಿಮಾ ಸುದ್ದಿ'ಕೆಲವೇ ದಿನಗಳಲ್ಲಿ ನಿಮ್ಮೊಂದಿಗೆ ಖುಷಿ ವಿಷಯ ಹಂಚಿಕೊಳ್ತೀನಿ': ಪತ್ನಿಗೆ ವಿಚ್ಛೇದನ ನೀಡಿದ ಬಳಿಕ ಕಿರಿಕ್ ಕೀರ್ತಿ
ಪತ್ರಕರ್ತ, ನಿರೂಪಕ, ಬಿಗ್ಬಾಸ್ ಕನ್ನಡ ರಿಯಾಲಿಟಿ ಶೋನ ಸ್ಪರ್ಧಿಯಾಗಿದ್ದ ಕಿರಿಕ್ ಕೀರ್ತಿ ಇದೀಗ ಭಾರಿ ಸುದ್ದಿಯಲ್ಲಿದ್ದಾರೆ. ಪತ್ನಿ ಅರ್ಪಿತಾಗೆ ವಿಚ್ಛೇದನ ನೀಡಿರುವುದಾಗಿ ನೆನ್ನೆಯಷ್ಟೇ ಸಾಮಾಜಿಕ ಮಾಧ್ಯಮದ ಮೂಲಕ ಘೋಷಿಸಿದ್ದರು. ಇದೀಗ ಮತ್ತೊಂದು ಪೋಸ್ಟ್ ಮಾಡಿರುವ ಅವರು, ಇನ್ನು ಕೆಲವೇ ದಿನಗಳಲ್ಲಿ ಖುಷಿಯ ವಿಚಾರವೊಂದನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ.