ರಾಜ್ಯಕರ್ನಾಟಕದ ಅಂಚೆ ಕಛೇರಿಗಳಲ್ಲಿ ಶೀಘ್ರದಲ್ಲೆ ರೈತರಿಗೆ ಖಾಸಗಿ ಬ್ಯಾಂಕ್ ಸಾಲ ವಿತರಣೆ ಮತ್ತು ಇಎಂಐ ಪಾವತಿ ಸೌಲಭ್ಯ!
ಎಚ್ಡಿಎಫ್ಸಿ ಬ್ಯಾಂಕ್ನೊಂದಿಗೆ ಪಾಲುದಾರಿಕೆ ಮೂಲಕ ಆರ್ಥಿಕ ಸಹಾಯ ಅಗತ್ಯವಿರುವ ರೈತರಿಗೆ ನೆರವಾಗಲು ರಾಜ್ಯದಾದ್ಯಂತ ವಿಶಾಲವಾದ ಅಂಚೆ ಜಾಲವನ್ನು ಶೀಘ್ರದಲ್ಲೇ ಭಾರತ ಅಂಚೆ ಬಳಸಿಕೊಳ್ಳಲಿದೆ. ಕರ್ನಾಟಕ ಪೋಸ್ಟಲ್ ಸರ್ಕಲ್ ರೈತರಿಗೆ ಸಾಲವನ್ನು ವಿತರಿಸಲಿದೆ ಮತ್ತು ಅವರ ಪರವಾಗಿ ತನ್ನ ಕಚೇರಿಗಳಲ್ಲಿ ಇಎಂಐಗಳನ್ನು ಸಂಗ್ರಹಿಸಲಿದೆ.