ರಾಜ್ಯಅಧಿಕಾರಿಗಳ ವಿರುದ್ಧದ ಖಾಸಗಿ ದೂರುಗಳನ್ನು ಪೂರ್ವಾನುಮತಿ ಇಲ್ಲದೆ ತನಿಖೆಗೆ ಪರಿಗಣಿಸುವುದು ಬೇಡ: ಹೈ ಕೋರ್ಟ್
ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಅಡಿಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದ ಅಥವಾ ಅನುಮೋದನೆ ಹೊಂದಿರದಿದ್ದಲ್ಲಿ, ಸಾರ್ವಜನಿಕ ಅಧಿಕಾರಿಗಳ ವಿರುದ್ಧದ ಖಾಸಗಿ ದೂರುಗಳನ್ನು ತನಿಖೆಗೆ ಪರಿಗಣಿಸದಂತೆ ಮ್ಯಾಜಿಸ್ಟ್ರೇಟ್ಗಳು, ಸೆಷನ್ ನ್ಯಾಯಾಧೀಶರು ಮತ್ತು ವಿಶೇಷ ನ್ಯಾಯಾಲಯಗಳಿಗೆ ಕರ್ನಾಟಕ ಹೈಕೋರ್ಟ್ ನಿರ್ದೇಶಿಸಿದೆ.