ಸಿನಿಮಾ ಸುದ್ದಿಕ್ಲಾಸಿಕ್ ರೊಮ್ಯಾನ್ಸ್'ಗಾಗಿ ಮತ್ತೆ ಒಂದಾದ 'ಗೋಧಿ ಬಣ್ಣ' ಬಳಗ
ಅವನೇ ಶ್ರೀಮನ್ನಾರಾಯಣ ಬಳಿಕ #777 ಚಾರ್ಲಿ ಚಿತ್ರದಲ್ಲಿ ತೊಡಗಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಯವರು ಬೇರೆಂದು ಬ್ಯೂಟಿಫುಲ್ ಟೈಟಲ್ ನೊಂದಿಗೆ ಮತ್ತೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಗೋಧಿಬಣ್ಣ ಸಾಧಾರಣ ಮೈಕಟ್ಟು ಬಳಿಕ ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ಹೇಮಂತ್ ರಾವ್, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜನಯ್ಯ ಅವರು ಮತ್ತೆ ಒಂದಾಗುತ್ತಿದ್ದಾರೆ.