ದೇಶಗೋವಾದಲ್ಲಿ ಪೂರ್ವಜರ ಆಸ್ತಿ ಕಬಳಿಕೆ: ಬ್ರಿಟನ್ ಗೃಹ ಕಾರ್ಯದರ್ಶಿ ತಂದೆ ಆರೋಪ; ಎಸ್ಐಟಿ ತನಿಖೆ
ಉತ್ತರ ಗೋವಾದಲ್ಲಿರುವ ತನ್ನ ಪೂರ್ವಜರ ಆಸ್ತಿಗಳನ್ನು ಅಪರಿಚಿತ ವ್ಯಕ್ತಿಯೊಬ್ಬರು ಕಬಳಿಸಿದ್ದಾರೆ ಎಂದು ಬ್ರಿಟನ್ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರೆವರ್ಮನ್ ಅವರ ತಂದೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ವಿಶೇಷ ತನಿಖಾ ತಂಡ ಪ್ರಕರಣ ದಾಖಲಿಸಿಕೊಂಡಿದೆ.