ಕ್ರಿಕೆಟ್ಫ್ರಾಂಚೈಸಿ ವಜಾ ಪ್ರಕರಣ: ಕೊಚ್ಚಿ ಟಸ್ಕರ್ಸ್ ಗೆ ಬಿಸಿಸಿಐ ನಿಂದ 800 ಕೋಟಿ ರೂ. ಪರಿಹಾರ?
2011ರಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಐಪಿಎಲ್ ಟೂರ್ನಿಯಿಂದ ಕೇರಳದ ಕೊಚ್ಚಿ ಟಸ್ಕರ್ಸ್ ತಂಡವನ್ನು ಕೈಬಿಡಲಾಗಿದ್ದ ಪ್ರಕರಣ ಸಂಬಂಧ ಬಿಸಿಸಿಐ ಇದೀಗ ಕೊಚ್ಚಿ ಟಸ್ಕರ್ಸ್ ಫ್ರಾಂಚೈಸಿಗೆ ಬರೊಬ್ಬರಿ 800 ಕೋಟಿಗೂ ಅಧಿಕ ಪರಿಹಾರ ಧನ ನೀಡಬೇಕಾದ ಅನಿವಾರ್ಯತೆಗೆ ಸಿಲುಕಿದೆ.