ಕ್ರಿಕೆಟ್ನನ್ನ ಆಯ್ಕೆಗಾಗಿ ತಂದೆ ಲಂಚ ನೀಡಲು ನಿರಾಕರಿಸಿದಾಗ ನಾನು ಕಣ್ಣೀರಿಟ್ಟಿದ್ದೆ: ವಿರಾಟ್ ಕೊಹ್ಲಿ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಲೋಕದಲ್ಲಿ ನಡೆದ ಲಂಚಾವತಾರವನ್ನು ಬಿಚ್ಚಿಟ್ಟಿದ್ದು, ದೆಹಲಿ ಜೂನಿಯರ್ ತಂಡಕ್ಕೆ ತಮ್ಮನ್ನು ಆಯ್ಕೆ ಮಾಡಲು ಅಧಿಕಾರಿಯೊಬ್ಬರು ಲಂಚ ಕೇಳಿದ್ದರು. ಆದರೆ ನನ್ನ ತಂದೆ ಲಂಚ ನೀಡಲು ನಿರಾಕರಿಸಿದ್ದರಿಂದ ನಾನು ಅಂದು ಕಣ್ಣೀರಿಟ್ಟಿದ್ದೆ ಎಂದು ಹೇಳಿದ್ದಾರೆ.