ಕೋವಿಡ್ ಸೋಂಕಿತರು

ರಾಜ್ಯದಲ್ಲಿ ಕೊರೋನಾದಿಂದ ಚೇತರಿಸಿಕೊಂಡ 151 ಮಂದಿಯಲ್ಲಿ ಕ್ಷಯರೋಗ ಪತ್ತೆ
ಕರ್ನಾಟಕದಲ್ಲಿ ಒಂದು ತಿಂಗಳ ಕಾಲ ನಡೆದ ಕ್ಷಯರೋಗ ಸಮೀಕ್ಷೆಯಲ್ಲಿ ಒಟ್ಟು 225 ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. 225 ರಲ್ಲಿ ಕೋವಿಡ್ ನಿಂದ ಚೇತರಿಸಿಕೊಂಡ 151 ರೋಗಿಗಳಲ್ಲಿ ಟಿಬಿ ಪತ್ತೆಯಾಗಿದೆ.

ಕೋವಿಡ್-19: ಅಕಾಲಿಕವಾಗಿ ಬಿಡುಗಡೆಯಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಹೆಚ್ಚಳ
ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ನಡುವೆಯೇ ತಾವು ಗುಣಮುಖರಾಗಿದ್ದೇವೆ ಎಂದು ಅಕಾಲಿಕವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮತ್ತೆ ಅನಾರೋಗ್ಯ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿದೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ಮೈಸೂರು: ನಿವೃತ್ತಿ ನಂತರವೂ ಕೋವಿಡ್ ಸೋಂಕಿತರಿಗೆ ನೆರವಾಗಲು ಸೇವೆಗೆ ಮರಳಿದ 66 ವರ್ಷದ ನರ್ಸ್!
ನಮ್ಮ ಮಧ್ಯೆ ಅದೆಷ್ಟೋ ಜನ ಸಹೃದಯಿಗಳು ಇರುತ್ತಾರೆ. ಬೇರೊಬ್ಬರ ಬಾಳಿಗೆ ಬೆಳಕಾಗಲು ಬಯಸುವ ಇವರು, ಸಮಾಜ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುತ್ತಾರೆ.

ಎಲ್ಲಾ ಕೋವಿಡ್ ಸೋಂಕಿತರ ಮಾದರಿಗಳನ್ನು 'ಜೀನೋಮ್ ಸೀಕ್ವೆನ್ಸಿಂಗ್' ಪರೀಕ್ಷೆಗೆ ಒಳಪಡಿಸಲಾಗುತ್ತಿದೆ: ಬಿಬಿಎಂಪಿ
ಕೊರೊನಾ ವೈರಸ್‌ನ ಬೇರೆ ಬೇರೆ ರೂಪಾಂತರಿ ತಳಿಗಳು ಪತ್ತೆಯಾಗುತ್ತಿರುವುದು ಬಿಬಿಎಂಪಿಯ ಚಿಂತೆಗೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಕೊರೋನಾ ಸೋಂಕಿತರ ಗಂಟಲದ ದ್ರವದ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೆಂಗಳೂರಿನಲ್ಲಿ 3000ಕ್ಕೂ ಹೆಚ್ಚು ಮಂದಿ ಕೋವಿಡ್ ಸೋಂಕಿತರು ನಾಪತ್ತೆ: ಸಚಿವ ಆರ್.ಅಶೋಕ್
ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಪ್ರಕರಣಗಳ ಮಧ್ಯೆ, ಹೆಚ್ಚಿನ ಸೋಂಕಿತ ಜನರು ತಮ್ಮ ಫೋನ್ ಸ್ವಿಚ್ ಆಫ್ ಮಾಡಿದ್ದಾರೆ ಮತ್ತು ಬೆಂಗಳೂರಿನಿಂದ 'ಕಾಣೆಯಾಗಿರುವ' ಸುಮಾರು 3 ಸಾವಿರ ಜನರು ಈ ರೋಗವನ್ನು ಹರಡುತ್ತಿದ್ದಾರೆ ಎಂದು ಕರ್ನಾಟಕ ಕಂದಾಯ ಸಚಿವ ಆರ್ ಆರ್.ಅಶೋಕ್ ಹೇಳಿದ್ದಾರೆ.

