ಕೋವಿಡ್ ರೋಗಿಗಳು

ಶೇ.75 ರಷ್ಟು ಕೋವಿಡ್ ರೋಗಿಗಳಿಗೆ ಆಸ್ಪತ್ರೆಯಲ್ಲಿ ಅಧಿಕ ಶುಲ್ಕ!
ಕೋವಿಡ್-19 ರೋಗಿಗಳ ಪೈಕಿ ಶೇ.75 ರಷ್ಟು ಮಂದಿಗೆ ಆಸ್ಪತ್ರೆಗಳಲ್ಲಿ ಅಧಿಕ ಶುಲ್ಕ ವಿಧಿಸಲಾಗಿದೆ ಎಂದು ಮಹಾರಷ್ಟ್ರದಲ್ಲಿ ನಡೆಸಿದ ಸಮೀಕ್ಷೆಯ ಮೂಲಕ ತಿಳಿದುಬಂದಿದೆ.

ಕೋವಿಡ್ ನಿಂದ ಗುಣಮುಖರಾದವರಲ್ಲಿಯೇ ಕ್ಷಯ ರೋಗ ಸಕ್ರಿಯ: ಸಚಿವ ಸುಧಾಕರ್
ಕೋವಿಡ್‌ನಿಂದ ಗುಣಮುಖರಾದವರಲ್ಲಿಯೇ ಕ್ಷಯ ರೋಗ ಸಕ್ರಿಯವಾಗಿರುವ ಪ್ರಕರಣಗಳು ಪತ್ತೆಯಾಗುತ್ತಿದ್ದು,ಕೊವಿಡ್‌ನಿಂದ ಗುಣಮುಖರಾದವರಲ್ಲಿ 24 ಜನರಿಗೆ ಕ್ಷಯ ರೋಗ ಪತ್ತೆಯಾಗಿದೆ.

41 ದಿನಗಳ ಕಾಲ ಕೋವಿಡ್-19 ಸೋಂಕಿನ ವಿರುದ್ಧ ಹೋರಾಡಿ ಗೆದ್ದ ಮಹಿಳೆ!
ತೀವ್ರ ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದ 36 ವರ್ಷದ ಮಹಿಳೆಯೊಬ್ಬರು ಬರೊಬ್ಬರಿ 41 ದಿನಗಳ ಕಾಲ ಹೋರಾಡಿ ಚೇತರಿಕೆ ಕಂಡಿರುವ ಪ್ರಕರಣ ಹೈದರಾಬಾದ್ ನಲ್ಲಿ ವರದಿಯಾಗಿದೆ.

ಮಂಡ್ಯ: 3 ಸಾವಿರಕ್ಕೂ ಹೆಚ್ಚು ಕೋವಿಡ್ ರೋಗಿಗಳಿಗೆ ದೈಹಿಕ ಶಿಕ್ಷಕನಿಂದ ಉಚಿತ ಯೋಗಾಭ್ಯಾಸ
ಕೊರೋನಾದಿಂದಾಗಿ ಹಲವು ಶಿಕ್ಷಕರು ಆನ್ ಲೈನ್ ತರಗತಿಗೆ ಬದಲಾಗಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ತರಗತಿ ನಡೆಸಲು ಸೀಮಿತರಾಗಿದ್ದಾರೆ.

ವಿಜಯಪುರ: ಬ್ಲ್ಯಾಕ್ ಫಂಗಸ್ ಸೋಂಕಿತರ ಪೈಕಿ 35% ಮಂದಿಗೆ ದೃಷ್ಟಿ ಸಮಸ್ಯೆ
ವಿಜಯಪುರ ಜಿಲ್ಲೆಯಲ್ಲಿ ಮ್ಯೂಕಾರ್ಮೈಕೋಸಿಸ್ (ಬ್ಲ್ಯಾಕ್ ಫಂಗಸ್ ) ಸೋಂಕಿಗೆ ಒಳಗಾದಜನರಲ್ಲಿ ಕನಿಷ್ಠ 35 ಪ್ರತಿಶತದಷ್ಟು ಜನರು ದೃಷ್ಟಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. .

ಕೋವಿಡ್ ರೋಗಿಗಳ ಸೇವೆಯಲ್ಲಿ ಸಿಲಿಕಾನ್ ಸಿಟಿಯ ಏಕೈಕ ಕ್ಯಾಬ್ ಚಾಲಕಿ ತುಳಸಿ ಲವಕುಮಾರ್!
ಕೋವಿಡ್ ರೋಗಿಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯುವ ಏಕೈಕ ಕ್ಯಾಬ್ ಚಾಲಕಿ ತುಳಸಿ ಲವಕುಮಾರ್. ಆಕೆ ತನ್ನದೇ ಆದ ಹೃದಯಸ್ಪರ್ಶಿ ಕಥೆಯನ್ನು ಹೊಂದಿದ್ದರೂ, ಪಿಪಿಇ ಸೂಟ್ ಧರಿಸಿದ 42 ವರ್ಷದ ತುಳಸಿ ಸದಾ ನಗುಮುಖದೊಂದಿಗೆ ಜನರ ಸೇವೆಗೆ ಸಜ್ಜಾಗುತ್ತಾರೆ. ಅವರ ಕ್ಯಾಬ್ ಬಳಸಿಕೊಳ್ಳುವ ಎಲ್ಲರಿಗೂ ಸಾಂತ್ವನ ನೀಡುತ್ತಾರೆ.

ಕೋವಿಡ್ ರೋಗಿಗಳಿಗೆ ಆನಂದಯ್ಯ ಅವರ ಆಯುರ್ವೇದ ಔಷಧ ಬಳಸಲು ಆಂಧ್ರ ಸರ್ಕಾರ ಅನುಮತಿ!
ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಹಳ್ಳಿಯ ಆಯುರ್ವೇದ ಪಂಡಿತ ಬಿ ಆನಂದಯ್ಯ ಅವರಿಂದ ತಯಾರಿಸಲ್ಪಟ್ಟ ಔಷಧದಿಂದ ಕೋವಿಡ್-19 ರೋಗಿಗಳು ಆಶ್ಚರ್ಯಕರ ರೀತಿಯಲ್ಲಿ ಗುಣಮುಖರಾಗುತ್ತಿದ್ದು, ಈ ಸಾಂಪ್ರಾದಾಯಿಕ ಔಷಧವನ್ನು ಸೋಂಕಿತರು ಚಿಕಿತ್ಸೆಯಾಗಿ ಬಳಸಲು ಆಂಧ್ರ ಪ್ರದೇಶ ಸರ್ಕಾರ ಸೋಮವಾರ ಹಸಿರು ನಿಶಾನೆ ತೋರಿದೆ.

ಕೊರೋನಾದಿಂದ ಚೇತರಿಸಿಕೊಂಡ ನಾಲ್ವರಲ್ಲಿ ಬ್ಲಾಕ್ ಫಂಗಸ್ ಪತ್ತೆ: ಜನರಲ್ಲಿ ಆತಂಕ
ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಕೋವಿಡ್ -19 ನಿಂದ ಚೇತರಿಸಿಕೊಂಡ ಕನಿಷ್ಠ ನಾಲ್ಕು ಜನರಲ್ಲಿ ಮಾರಣಾಂತಿಕ ಬ್ಲಾಕ್ ಫಂಗಸ್ (Mucormycosis) ಸೋಂಕು ಪತ್ತೆಯಾಗಿದ್ದು ಸ್ಥಳೀಯರಲ್ಲಿ ಭಯ ಹುಟ್ಟಿಸಿದೆ.

ಟೋಲ್ ಪ್ಲಾಜಾದಲ್ಲಿ ಆ್ಯಂಬುಲೆನ್ಸ್ ಗೆ ಪೊಲೀಸರಿಂದ ತಡೆ: ಆಂಧ್ರ- ತೆಲಂಗಾಣ ಗಡಿಯಲ್ಲಿ ಇಬ್ಬರು ಕೋವಿಡ್ ರೋಗಿಗಳ ಸಾವು
ಕರ್ನೂಲು ಜಿಲ್ಲೆಯ ಆಂಧ್ರಪ್ರದೇಶ- ತೆಲಂಗಾಣ ಗಡಿಯ ಟೋಲ್ ಪ್ಲಾಜಾದಲ್ಲಿ ಆ್ಯಂಬುಲೆನ್ಸ್ ತಡೆಹಿಡಿದ ಕಾರಣ ಇಬ್ಬರು ಕೋವಿಡ್ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.

