ರಾಜ್ಯಖಾಸಗಿ ಆಸ್ಪತ್ರೆಗಳ 779 ಕೋಟಿ ರೂ. ಮೊತ್ತದ ಕೋವಿಡ್ ಬಿಲ್ ಗಳ ಪಾವತಿ ಮಾಡಿದ ರಾಜ್ಯ ಸರ್ಕಾರ!
ರಾಜ್ಯ ಆರೋಗ್ಯ ಇಲಾಖೆಯು ತನ್ನ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್ಎಎಸ್ಟಿ) ಮೂಲಕ ಆಯುಷ್ಮಾನ್ ಭಾರತ್ ಆರೋಗ್ಯ ಅಡಿಯಲ್ಲಿ 2,39,736 ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳಿಗೆ 779.834 ಕೋಟಿ ರೂ (779,83,40,000) ಮಂಜೂರು ಮಾಡಿದೆ ಎಂದು ತಿಳಿದುಬಂದಿದೆ.