ಕೋವಿಡ್ ಕೇರ್ ಕೇಂದ್ರ

ಕಾರ್ಯಪಡೆ ವರದಿ ಸಲ್ಲಿಸುವವರೆಗೆ ಕೋವಿಡ್ ಆರೈಕೆ ಕೇಂದ್ರ ಮುಚ್ಚಬೇಡಿ: ಬಿಬಿಎಂಪಿಗೆ 'ಹೈ' ಸೂಚನೆ
ಕೊರೋನಾ 3ನೇ ಅಲೆ ಸಾಧ್ಯತೆ ಹಿನ್ನೆಲೆಯಲ್ಲಿ ಕೊರೋನಾ 3ನೇ ಅಲೆ ನಿಯಂತ್ರಣಕ್ಕೆ ಸಿದ್ಧತೆ ಕೈಗೊಳ್ಳುವ ಸಂಬಂಧ ವರದಿ ನೀಡಲು ರಚಿಸಿರುವ ಕಾರ್ಯಪಡೆ ವರದಿ ಸಲ್ಲಿಸುವವರೆಗೆ ಕೋವಿಡ್ ಆರೈಕೆ ಕೇಂದ್ರಗಳನ್ನು ಮುಚ್ಚಬಾರದು ಎಂದು ಬಿಬಿಎಂಪಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದವರಿಗೆ ರೂ.2 ಸಾವಿರ ಬಹುಮಾನ: ಗ್ರಾ.ಪಂ ಅಧ್ಯಕ್ಷನಿಂದ ಬಂಪರ್ ಆಫರ್
ಕೊರೊನಾ ಟೆಸ್ಟ್ ಮಾಡಿಸಿಕೊಂಡವರಿಗೆ ತಲಾ ಐನೂರು ರೂಪಾಯಿ ಕೊಡುವುದಾಗಿ ಹೇರೂರು ಪಂಚಾಯತ್ ಅಧ್ಯಕ್ಷ ಘೋಷಣೆ ಮಾಡಿದ ಬೆನ್ನಲ್ಲೆ, ಇದೀಗ ಕನಕಗಿರಿ ತಾಲೂಕು ಚಿಕ್ಕಮಾದಿನಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ತಲಾ 2 ಸಾವಿರ ರೂಪಾಯಿ ಇನಾಮು ಪ್ರಕಟಿಸಿದ್ದಾರೆ.

ಚಾಮರಾಜನಗರ: ಬುಡಕಟ್ಟು ಜನರ ಮನವೊಲಿಸಿದ ಅಧಿಕಾರಿಗಳು, ಕೋವಿಡ್ ಕೇರ್ ಕೇಂದ್ರಕ್ಕೆ ಹೋಗಲು ಒಪ್ಪಿಗೆ
ಮೂಡನಂಬಿಕೆಗಳಿಗೆ ಜೋತು ಬಿದ್ದು ಕೊರೋನಾ ಲಸಿಕೆ, ಕೊರೋನಾ ತಪಾಸಣೆಗೊಳಗಾಗದೆ, ಸೋಂಕಿತರು ಕೋವಿಡ್ ಕೇರ್ ಕೇಂದ್ರಕ್ಕೆ ತೆರಳದೆ ಪಟ್ಟುಹಿಡಿದು ಕುಳಿತಿದ್ದ ಬುಡಕಟ್ಟು ಜನರ ಮನವೊಲಿಸಿರುವ ಅಧಿಕಾರಿಗಳು, ಕೊನೆಗೂ ಸೋಂಕಿತರು ಕೋವಿಡ್ ಕೇರ್ ಕೇಂದ್ರಕ್ಕೆ ತೆರಳುವಂತೆ ಮಾಡಿದ್ದಾರೆ.

ಬೆಂಗಳೂರು: ಕೋವಿಡ್ ಕೇರ್ ಕೇಂದ್ರಕ್ಕೆ ಸಚಿವ ಸೋಮಣ್ಣ ಚಾಲನೆ
ಬ್ಲ್ಯಾಕ್ ಫಂಗಸ್ ನಿಂದ ಬಳಲುತ್ತಿರುವ ರೋಗಿಗಳಿಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಪಾಲಿಕೆಯ ಪೂರ್ವ ವಲಯ ಕೋವಿಡ್-19 ಮೇಲ್ವಿಚಾರಣೆ ಉಸ್ತುವಾರಿ ಹೊತ್ತಿರುವ ವಸತಿ ಸಚಿವ ವಿ.ಸೋಮಣ್ಣ ಅವರು ಹೇಳಿದ್ದಾರೆ.

ರೋಗಿಗಳನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ಸ್ಥಳಾಂತರಿಸಲು ಗ್ರಾಮಗಳಿಗೆ ಸರ್ಕಾರದಿಂದ ಉಚಿತ ವಾಹನ ವ್ಯವಸ್ಥೆ
ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಳ್ಳಿಗಳಿಂದ ಕೊರೋನಾ ರೋಗಿಗಳನ್ನು ಕೋವಿಡ್ ಕೇರ್ ಕೇಂದ್ರಗಳಿಗೆ ಸ್ಥಳಾಂತರಿಸಲು ಸರ್ಕಾರ ವ್ಯವಸ್ಥೆ ಮಾಡುತ್ತಿದೆ.

ಕೋವಿಡ್ ಆರೈಕೆ ಕೇಂದ್ರಗಳಾಗಿ ದೇವಾಲಯಗಳ ಸಮುದಾಯ ಭವನ, ಹಜ್ ಭವನಗಳ ಮಾರ್ಪಾಡು!
ಸ್ಥಳೀಯ ಜನರಿಗೆ ಸಹಾಯ ಮಾಡಲು ಕರ್ನಾಟಕದಲ್ಲಿರುವ ದೇವಾಲಯಗಳ ಸಮುದಾಯ ಭವನಗಳನ್ನು ಕೋವಿಡ್ ಕೇರ್ ಕೇಂದ್ರಗಳಾಗಿ ಪರಿವರ್ತಿಸಲಾಗುತ್ತಿದೆ.

ನಷ್ಟದಿಂದ ಕಂಗಾಲು: ಹೋಟೆಲ್ ಗಳನ್ನು ಕೋವಿಡ್ ಕೇರ್ ಕೇಂದ್ರವಾಗಿಸಿ ಸೇವೆ ಒದಗಿಸಲು ಮುಂದಾದ ಮಾಲೀಕರು!
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ವ್ಯಾಪಕಗೊಂಡಿದ್ದು, ಕರ್ಫ್ಯೂ, ಲಾಕ್ಡೌನ್ ಸಂಕಷ್ಟದಿಂದಾಗಿ ನಷ್ಟ ಅನುಭವಿಸುತ್ತಿರುವ ಹೋಟೆಲ್ ಗಳ ಮಾಲೀಕರು ಇದೀಗ ತಮ್ಮ ಸ್ಟಾರ್ ಹೋಟೆಲ್ ಗಳನ್ನು ಕೋವಿಡ್ ಕೇರ್ ಕೇಂದ್ರಗಳನ್ನಾಗಿ ಮಾರ್ಪಡಿಸಿ, ಸೋಂಕಿತರಿಗೆ ಸೇವೆಗಳನ್ನು ಒದಗಿಸಲು ಮುಂದಾಗಿದ್ದಾರೆ.

ರಾಜ್ಯದಲ್ಲೇ ಪ್ರಥಮ: ತಮ್ಮ ಮನೆಯನ್ನೇ ಕೋವಿಡ್ ಕೇರ್ ಕೇಂದ್ರವಾಗಿಸಿದ ಸಚಿವ ಬಸವರಾಜ ಬೊಮ್ಮಾಯಿ!
ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ತಮ್ಮ ಮನೆಯನ್ನೇ ಕೊವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ್ದಾರೆ.

ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೋವಿಡ್ ಕೇರ್ ಕೇಂದ್ರ ಸ್ಥಾಪನೆಗೆ ಸರ್ಕಾರ ಚಿಂತನೆ
ವಲಸಿಗರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಕೆಲವು ವಾರಗಳಲ್ಲಿ ಗ್ರಾಮೀಣ ಭಾಗದಲ್ಲಿಯೂ ಕೊರೋನಾ ಸೋಂಕಿತರ ಸಂಖಅಯೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಕೋವಿಡ್ ಕೇರ್ ಕೇಂದ್ರ ಸ್ಥಾಪನೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

