ಕ್ರಿಕೆಟ್ಐಪಿಎಲ್: ವರುಣ್ ಚಕ್ರವರ್ತಿ ಮಾರಕ ಬೌಲಿಂಗ್ ಗೆ ತತ್ತರಿಸಿದ ಡೆಲ್ಲಿ, ಕೆಕೆಆರ್ ಗೆ 59 ರನ್ ಜಯ
ವರುಣ್ ಚಕ್ರವರ್ತಿ (20ಕ್ಕೆ 5) ಮತ್ತು ಪ್ಯಾಟ್ ಕಮಿನ್ಸ್ (17ಕ್ಕೆ 3) ಅವರ ಮಾರಕ ಬೌಲಿಂಗ್ ದಾಳಿಯ ಜತೆಗೆ ನಿತೀಶ್ ರಾಣಾ (81) ಮತ್ತು ಸುನೀಲ್ ನರೈನ್(64) ಅವರ ಅಬ್ಬರದ ಅರ್ಧಶತಕಗಳ ನೆರವಿನಿಂದ ಕೋಲ್ಕೊತಾ ನೈಟ್ ರೈಡರ್ಸ್ ತಂಡ ಐಪಿಎಎಲ್ 42ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 59 ರನ್ ಗಳಿಂದ ಬಗ್ಗು ಬಡಿದು ಟೂರ್ನಿಯಲ್ಲಿ 6ನೇ ಜಯ ದಾಖಿಲಿಸಿತು.