ರಾಜಕೀಯಹೈಟೆಕ್ ಬಸ್ಸಿನಲ್ಲಿ ಕೋಲಾರ ಸುತ್ತಿಕೊಂಡು ಬರಲು ಹೊರಟ ಸಿದ್ದರಾಮಯ್ಯ: ಚಿನ್ನದ ನಾಡಿನಿಂದ ಈ ಬಾರಿ ಸ್ಪರ್ಧೆ?
2023 ವಿಧಾನಸಭೆ ಚುನಾವಣೆಗೆ ದಿನ ಸನ್ನಿಹಿತವಾಗುತ್ತಿದೆ. ಇನ್ನು ಕೆಲವೇ ತಿಂಗಳುಗಳು ಬಾಕಿ. ಈ ಹೊತ್ತಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಬಾರಿ ಕ್ಷೇತ್ರ ಹುಡುಕಾಟದಲ್ಲಿ ತೊಡಗಿದ್ದಾರೆ. ಈ ಬಾರಿ ಅವರು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ.