ರಾಜಕೀಯಬಿಜೆಪಿ ಕೋರ್ ಕಮಿಟಿ ಸಭೆ 2ನೇ ದಿನ: ಅಭ್ಯರ್ಥಿಗಳ ಮೊದಲ ಪಟ್ಟಿ ಶೀಘ್ರದಲ್ಲೇ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ರವಾನೆ
ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಈ ನಡುವಲ್ಲೇ ಭಾರತೀಯ ಜನತಾ ಪಕ್ಷವು ತನ್ನ ಎರಡು ದಿನಗಳ ಕೋರ್ ಕಮಿಟಿ ಸಭೆಯನ್ನು ಮಂಗಳವಾರ ಆರಂಭಿಸಿದೆ. ಸಭೆಯಲ್ಲಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಕುರಿತು ಚರ್ಚೆಗಳು ನಡೆಯಲಿದ್ದು, ಪಟ್ಟಿ ಸಿದ್ಧಗೊಂಡ ಬಳಿಕ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ರವಾನಿಸಲಿದೆ.