ರಾಜ್ಯರಾಜ್ಯದಲ್ಲಿ ಬರದ ಭೀತಿಯ ನಡುವೆಯೇ ಜಲಪ್ರಳಯದ ಎಚ್ಚರಿಕೆ ಕೊಟ್ಟ ಕೋಡಿಮಠ ಶ್ರೀ!
‘ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಲಿದ್ದು, ಜಲಪ್ರಳಯ ಆಗುವ ಲಕ್ಷಣಗಳಿವೆ. ಪ್ರಕೃತಿ ಮುನಿದಿದ್ದು ಸರಿಯಾಗಲಿದೆ. ಜಾಗತಿಕ ಮಟ್ಟದಲ್ಲಿ ದುರಂತ ಆಗುವುದಿದೆ. ಜನರ ಅಕಾಲ ಮೃತ್ಯು ಸಂಭವಿಸುವ ಸಾಧ್ಯತೆ ಇದೆ’ ಎಂದು ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.