ರಾಜ್ಯಯುವಜನತೆಯನ್ನು ತಂಬಾಕು ಬಳಕೆಯಿಂದ ರಕ್ಷಿಸಲು ಕಾನೂನು ಬಲಗೊಳಿಸುವ ತುರ್ತು ಅಗತ್ಯವಿದೆ: ತಜ್ಞರ ಅಭಿಮತ
ತಂಬಾಕು ಉತ್ಪನ್ನಗಳ ಮಾರಾಟದ ಕಾನೂನಾತ್ಮಕ ವಯಸ್ಸಿನ ಮಿತಿ 21 ವರ್ಷಗಳಿಗೆ ಏರಿಕೆ, ತಂಬಾಕು ಜಾಹೀರಾತು ಮತ್ತು ಪ್ರಚಾರದ ಮೇಲೆ ಸಮಗ್ರ ನಿಷೇಧ ಮತ್ತು ಸಿಂಗಲ್-ಸ್ಟಿಕ್ ಸಿಗರೇಟ್ (ಸಿಗರೇಟ್/ಬೀಡಿಗಳ ಬಿಡಿ ಮಾರಾಟ) ಮೇಲೆ ನಿರ್ಬಂಧ- ಇವು ಮಕ್ಕಳು ಮತ್ತು ವಿದ್ಯಾರ್ಥಿಗಳು ಸಣ್ಣ ವಯಸ್ಸಿನಲ್ಲಿ ತಂಬಾಕು ಬಳಕೆಯ ಅಭ್ಯಾಸಕ್ಕೆ ಸಿಲುಕುವುದನ್ನು ತಡೆಯಲು ತಜ್ಞರು ನೀಡಿರುವ ಕೆಲ ಶಿಫಾರಸುಗಳಾಗಿವೆ.