ದೇಶಮಧ್ಯ ಪ್ರದೇಶ: ಸತತ 52 ಗಂಟೆಗಳ ರಕ್ಷಣಾ ಕಾರ್ಯಾಚರಣೆ ವಿಫಲ, ಕೊಳವೆ ಬಾವಿಗೆ ಬಿದ್ದಿದ್ದ ಬಾಲಕಿ ಸಾವು
ಮಧ್ಯಪ್ರದೇಶದ ಸೆಹೋರ್ನಲ್ಲಿ 300 ಅಡಿ ಬೋರ್ವೆಲ್ಗೆ ಬಿದ್ದಿದ್ದ ಎರಡೂವರೆ ವರ್ಷದ ಬಾಲಕಿ ಮೃತಪಟ್ಟಿದ್ದಾಳೆ. ಸೇನೆ, ಎನ್ ಡಿಆರ್ ಎಫ್, ಎಸ್ ಡಿಇಆರ್ ಎಫ್ ಸಿಬ್ಬಂದಿ, ಭಾರಿ ಯಂತ್ರೋಪಕರಣಗಳು, ರೊಬೋಟಿಕ್ ತಂಡ ಸತತ 50 ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದವು. ಆದರೂ, ಬಾಲಕಿ ಬದುಕುಳಿಯಲಿಲ್ಲ.