ರಾಜ್ಯಚರಂಡಿ ತುಂಬೆಲ್ಲಾ ಬೀಳಿಸಿದ ಕಟ್ಟಡಗಳ ಅವಶೇಷ, ನೀರು ತುಂಬಿಕೊಂಡು ದುರ್ನಾತ: ವೈಟ್ಫೀಲ್ಡ್ ನಿವಾಸಿಗಳ ಅಳಲು
ಕೆಸರು, ಕೊಚ್ಚೆ, ಹೂಳು ತುಂಬಿಕೊಂಡಿದ್ದ ರಾಜಕಾಲುವೆಗಳಿಂದ ದುರ್ನಾತ ಬೀರುತ್ತಿದೆ ಎಂದು ವೈಟ್ಫೀಲ್ಡ್ ಮತ್ತು ಪ್ರೆಸ್ಟೀಜ್ ಓಝೋನ್ ಅಪಾರ್ಟ್ಮೆಂಟ್ ನಿವಾಸಿಗಳು ಆರೋಪಿಸುತ್ತಿದ್ದಾರೆ. ಮುಚ್ಚಿಹೋಗಿರುವ ಚರಂಡಿಗಳನ್ನು ತೆರವುಗೊಳಿಸದಿದ್ದಲ್ಲಿ ಭವಿಷ್ಯದಲ್ಲಿ ಮತ್ತೆ ಪ್ರವಾಹ ಉಂಟಾಗುವ ಭೀತಿ ಇಲ್ಲಿನ ನಿವಾಸಿಗಳನ್ನು ಕಾಡುತ್ತಿದೆ.