ವಾಣಿಜ್ಯಕೊರೋನಾ ವಿರುದ್ಧ ಹೋರಾಟ: ಭಾರತಕ್ಕೆ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕಿನಿಂದ 2.2 ಬಿಲಿಯನ್ ಡಾಲರ್ ನೆರವು
ಕೊರೋನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತಕ್ಕೆ 2.2 ಶತಕೋಟಿ ಡಾಲರ್ (ಸುಮಾರು 16,500 ಕೋಟಿ ರೂ.) ನೆರವು ನೀಡುವುದಾಗಿ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಅಧ್ಯಕ್ಷ ಮಸತ್ಸುಗು ಅಸಕವಾ ಭರವಸೆ ನೀಡಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಜತೆ ಸಂವಹನ ನಡೆಸಿದ ಅಸಕವಾ ಈ ನೆರವಿನ ಕುರಿತು ಹೇಳಿದ್ದಾರೆ.