ವಿದೇಶಭಾರತದಲ್ಲಿ ಕೊರೋನಾ 3ನೇ ಹಂತ ತಲುಪಿಲ್ಲ, ಇನ್ನೂ ಸುರಕ್ಷಿತ ವಲಯದಲ್ಲಿದೆ: ವಿಶ್ವ ಆರೋಗ್ಯ ಸಂಸ್ಥೆ
ಈ ಹಿಂದೆ ಭಾರತದಲ್ಲಿ ಕೊರೋನಾ ವೈರಸ್ ಹರಡುವಿಕೆ ಸಮುದಾಯಿಕ ಪ್ರಸರಣ ಹಂತ ತಲುಪಿದೆ ಎಂದು ಪ್ರಕಟಿಸಿ ೧೩೫ ಕೋಟಿ ಮಂದಿ ಭಾರತೀಯರಲ್ಲಿ ತಲ್ಲಣ ಮೂಡಿಸಿದ್ದ ವಿಶ್ವ ಆರೋಗ್ಯ ಸಂಸ್ಥೆ, ಈಗ ತಾನು ತಪ್ಪಾಗಿ ಅಂದಾಜು ಮಾಡಿದ್ದಾಗಿ, ತಾನು ಮಾಡಿದ್ದು ಪ್ರಮಾದ ಎಂದು ಒಪ್ಪಿಕೊಂಡು, ಭಾರತ ಇನ್ನೂ ಸುರಕ್ಷಿತ ವಲಯದಲ್ಲಿಯೇ ಇದೆ ಎಂದು ಸ್ಪಷ್ಟಪಡಿಸಿದೆ.