ದೇಶಆಗಸ್ಟ್ 15ರೊಳಗೆ ಲಸಿಕೆ ನೀಡುವ ಐಸಿಎಂಆರ್ ಯೋಜನೆ ಪ್ರಶ್ನಿಸಿದ ಪೃಥ್ವಿರಾಜ್ ಚವಾಣ್
ಆಗಸ್ಟ್ 15 ರೊಳಗೆ ಕರೋನಾ ವೈರಸ್ ಗೆ ಲಸಿಕೆ ಬಿಡುಗಡೆ ಮಾಡುವ ಐಸಿಎಂಆರ್ ಯೋಜನೆಯನ್ನು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ಪೃಥ್ವಿರಾಜ್ ಚವಾಣ್ ಅವರು, ಇದು ಪ್ರಧಾನಿ ಮೋದಿ ಅವರಿಗೆ ಕೆಂಪು ಕೋಟೆಯಿಂದ ದೊಡ್ಡ ಘೋಷಣೆ ಮಾಡಲು ಅನುವು ಮಾಡಿಕೊಡುವ ಉದ್ದೇಶ ಹೊಂದಿದೆ ಎಂದು ಶನಿವಾರ ಆರೋಪಿಸಿದ್ದಾರೆ.