ಕೊರೋನಾ ಲಾಕ್‌ಡೌನ್

ಸೇವಾ ಸಿಂಧು ಪೋರ್ಟಲ್ ನಲ್ಲಿ ಚಾಲಕರ ಅರ್ಜಿ ಕಾಲಂ ತೆಗೆದ ಸರ್ಕಾರ: ಸಾರಥಿಗಳನ್ನು ನಡುನೀರಿನಲ್ಲಿ ಕೈಬಿಟ್ಟ ಸರ್ಕಾರ
ಅವೈಜ್ಞಾನಿಕ ಲಾಕ್ ಡೌನ್ ಜಾರಿ ಮಾಡಿ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಬರೆ ಎಳೆದಿದ್ದ ಸರ್ಕಾರ, ಇದೀಗ ನೆರವು ನೀಡುವುದಾಗಿ ನಂಬಿಸಿ ಲಕ್ಷಾಂತರ ಚಾಲಕರನ್ನು ನಡು ನೀರಿನಲ್ಲಿ ಕೈಬಿಟ್ಟಿದೆ.

ಕೊರೋನಾ ಲಾಕ್ ಡೌನ್: ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಗಳು ಮೇ ತಿಂಗಳಿಗೆ ಮುಂದೂಡಿಕೆ
ಏ ೧೦(ಯುಎನ್‌ಐ) ರಾಜ್ಯದಲ್ಲಿ ಕಾಳ್ಗಿಚ್ಚಿನಂತೆ ಹಬ್ಬುತ್ತಿರುವ ಕೊರೊನಾ ವೈರಾಣು ಮಹಾಮಾರಿಯನ್ನು ನಿಯಂತ್ರಿಸುವ ಕ್ರಮವಾಗಿ ಜಾರಿಗೊಳಿಸಲಾಗಿರುವ ಲಾಕ್ ಡೌನ್ ವಿಸ್ತರಣೆ ಸಾಧ್ಯತೆಯ ಹಿನ್ನಲೆಯಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯನ್ನು ರಾಜ್ಯ ಶಿಕ್ಷಣ ಮಂಡಳಿ ಮೇ ತಿಂಗಳಿಗೆ ಮುಂದೂಡಿದೆ.

ಕೊರೋನಾ ಲಾಕ್‌ಡೌನ್ ಮಧ್ಯೆ 'ಫ್ರೈಯಿಂಗ್ ಪ್ಯಾನ್' ಚಾಲೆಂಜ್ ನೀಡಿದ ಲಿಯಾಂಡರ್ ಪೇಸ್!
ಅನುಭವಿ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಈಗ ಲಾಕ್ ಡೌನ್ ವೇಳೆ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಪೇಸ್ ಹೊಸ 'ಫ್ರೈಯಿಂಗ್ ಪ್ಯಾನ್' ಚಾಲೆಂಜ್ ಮೂಲಕ ಸಾಮಾಜಿಕ ತಾಣದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಲು ತಯಾರಾಗಿದ್ದಾರೆ. ಕೊರೋನಾ ಕಾರಣ ದೇಶವೇ ಲಾಕ್ ಡೌನ್ ಆಗಿ ಎಲ್ಲರೂ ಮನೆಗಳಲ್ಲಿರುವ ಕಾರಣ ತಮ್ಮ ಅಭಿಮಾನಿಗಳು ಈ ಚಾಲೆಂಜ್ ತೆಗೆದುಕೊಳ್ಳಿ ಎಂದು

ಕೊರೋನಾ ಲಾಕ್‌ಡೌನ್ ವೇಳೆ ಆಹಾರ, ಆಶ್ರಯ ಅರಸುವವರಿಗೆ ಗೂಗಲ್ ಮ್ಯಾಪ್ ನೆರವು
ದೇಶಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್ ಸಮಯದಲ್ಲಿ ಅಗತ್ಯ ಸೇವೆಗಾಗಿ ಜನರು ಹುಡುಕಾಟ ನಡೆಸುವುದನ್ನು ತಡೆಯಲು ಅಂತಹಾ ಜನರ ಸಹಾಯಕ್ಕಾಗಿ ಗೂಗಲ್ ಮುಂದೆ ಬಂದಿದೆ. ಗೂಗಲ್ ತನ್ನ ಗೂಗಲ್ ಮ್ಯಾಪಿನಲ್ಲಿ ಭಾರತದಾದ್ಯಂತದ ನಗರಗಳಲ್ಲಿನ ಆಹಾರ ತಾಣಗಳು ಹಾಗೂ ರಾತ್ರಿ ವೇಳೆ ತಂಗಲು ಸೂಕ್ತವಾದ ಆಶ್ರಯ ತಾಣಗಳ ವಿವರ ಅಳವಡಿಸಿದೆ.

ಲಾಕ್‌ಡೌನ್ ಎಂದು ಸುಮ್ನೆ ಕೂರಬೇಡಿ: ಕೌಟುಂಬಿಕ ಹಿಂಸಾಚಾರ ಬಹಿರಂಗಪಡಿಸಲು ಬಂದಿದೆ 'ರೆಡ್ ಡಾಟ್' ಅಸ್ತ್ರ!
ಮಹಿಳಾ ಉದ್ಯಮಿ ಇತಿ ರಾವತ್ ಇತ್ತೀಚೆಗೆ ತಮ್ಮ ಮೇಲ್ ನಲ್ಲಿ ಒಂದು ಸಮ್ದೇಶ ಸ್ವೀಕರಿಸಿದ್ದರು. ಅದರಲ್ಲಿ ಓರ್ವ ಮಹಿಳೆಯ ತನ್ನ ಅಂಗೈಮೇಲೆ ಕೆಂಪು ಚುಕ್ಕೆ ಹೊಂದಿದ್ದ ಚಿತ್ರದೊಡನೆ "ಮ್ಯಾಮ್, ನನಗೆ ನಿಮ್ಮ ಸಹಾಯ ಬೇಕು" ಎಂಬ ಸಂದೇಶವಿತ್ತು. ಮಹಿಳೆ ಮೇಲೆ ಮನೆಯಲ್ಲಿ ನಡೆಯುವ ಕಿರುಕುಳಕ್ಕೆ ಸಂಬಂಧಿಸಿ ಈ ಸಂದೇಶವಿತ್ತು.

ಕೊರೋನಾ ಲಾಕ್‌ಡೌನ್ ನಡುವೆ ನಿರಾಶ್ರಿತ ನಾರಿಗೆ ಹುಬ್ಬಳ್ಳಿ ಪೋಲೀಸರ ನೆರವಿನ ಹಸ್ತ
ದೇಶಾದ್ಯಂತ ಕೊರೋನಾ ಲಾಕ್ ಡೌನ್ ಕಾರಣ ದಿನಗೂಲಿಗಳು, ಬಡವರು ತೊಂದರೆಗೀಡಾಗಿದ್ದಾರೆ. ಈ ಸಮಯದಲ್ಲಿ ಪೋಲೀಸರು ಇಂತಹವರ ಸಹಾಯಕ್ಕೆ ಬರುತ್ತಿದ್ದಾರೆ. ಶುಕ್ರವಾರ ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಬಳಿ ಬೀದಿಯಲ್ಲಿ ತಂಗಿದ್ದ ಮಹಿಳೆಯೊಬ್ಬರಿಗೆ ಮಹಿಳಾ ಪೊಲೀಸರು ಸ್ನಾನ ಮಾಡಿಸಿದ್ದಾರೆ.

ಕರ್ನಾಟಕ-ಕೇರಳ ಗಡಿ ಬಂದ್: ರಾಜ್ಯದ ನಡೆಗೆ ಎಚ್.ಡಿ.ದೇವೇಗೌಡ ಬೇಸರ
ಕರ್ನಾಟಕ ಕೇರಳ ಗಡಿ ಪ್ರವೇಶ ವಿಚಾರವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪತ್ರ ಬರೆದಿದ್ದಾರೆ

ಕೊರೋನಾ ಲಾಕ್‌ಡೌನ್ ಸಮಯದಲ್ಲಿ ಸ್ಯಾಂಡಲ್ ವುಡ್ ನಟ, ನಿರ್ದೇಶಕರ ದಿನಚರಿ ಹೀಗಿದೆ ನೋಡಿ
ಪ್ರಿಯಾಂಕಾ ಉಪೇಂದ್ರ ಇದೀಗ ಸಂಪೂರ್ಣವಾಗಿ ಮನೆಗೆಲಸದಲ್ಲಿ ತೊಡಗಿದ್ದಾರೆ. ಕೋವಿಡ್ ಮಹಾಮಾರಿಯ ಕಾರಣ ದೇಶಾದ್ಯಂತ ಲಾಕ್ ಡೌನ್ ಆಗಿದ್ದು ಚಿತ್ರರಂಗ ಸ್ಥಬ್ದವಾಗಿರುವ ಹಿನ್ನೆಲೆ ಪ್ರಿಯಾಂಕಾ ಗೃಹಿಣಿಯಾಗಿ ಮನೆಗೆಲಸದಲ್ಲಿ ತಮ್ಮನ್ನು ತೊಡಗಿಸಿದ್ದಾರೆ. "ನಮ್ಮ ಮನೆ ಕೆಲಸದವರೆಲ್ಲಾ ರಜೆಗೆ ತೆರಳಿದ್ದ ಕಾರಣ ಮನೆಯಲ್ಲಿ ಬಹಳ ಕೆಲಸವಿದೆ.ನಾನು ಅಡುಗೆ ಮಾಡುತ್ತಿದ್ದೇನೆ ಮತ್ತು ಕುಟ

ಲಾಕ್‌ಡೌನ್ ಸಮಯದಲ್ಲಿ ಗ್ರಾಹಕರ ಪ್ರಿಪೇಯ್ಡ್ ವ್ಯಾಲಿಡಿಟಿ ವಿಸ್ತರಿಸಿ: ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ಮನವಿ
21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ಸಮಯದಲ್ಲಿ ಚಂದಾದಾರರು ನಿರಂತರ ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಪ್ರಿಪೇಯ್ಡ್ ಬಳಕೆದಾರರ ವ್ಯಾಲಿಡಿಟಿ ಅವಧಿಯನ್ನು ವಿಸ್ತರಿಸುವಂತೆ ದೂರಸಂಪರ್ಕ ನಿರ್ದೇಶನಾಲಯ ಟ್ರಾಯ್ ಟೆಲಿಕಾಂ ಆಪರೇಟರ್‌ಗಳನ್ನು ಕೇಳಿದೆ.

