ರಾಜ್ಯಹಾಸನ: ಶಿಥಿಲಾವಸ್ಥೆಯಲ್ಲಿ ಕೊಣನೂರು ಪಾದಚಾರಿ ತೂಗು ಸೇತುವೆ! ರಿಪೇರಿಗೆ ಮುಂದಾದ ಜಿಲ್ಲಾಡಳಿತ
ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಕೊಣನೂರು ಬಳಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಎರಡು ದಶಕಗಳ ಹಳೆಯದಾದ ತೂಗು ಸೇತುವೆ ದುರಸ್ತಿಗಾಗಿ ಜನರ ಸಂಚಾರವನ್ನು ನಿಷೇಧಿಸಲಾಗಿದೆ. ಸಂಭಾವ್ಯ ದುರಂತಕ್ಕೂ ಮುನ್ನ ಕೊನೆಗೂ ದುರಸ್ತಿಗೆ ನಿರ್ಧಾರ ಕೈಗೊಂಡಿರುವುದಕ್ಕೆ ಜಿಲ್ಲಾಡಳಿತಕ್ಕೆ ಧನ್ಯವಾದ ಸಲ್ಲಿಸಲಾಗುತ್ತಿದೆ.