ರಾಜ್ಯವೈಭವಯುತವಾಗಿದ್ದ ಪುರಾತನ ಕೊಂಡಜ್ಜಿ ವರದರಾಜಸ್ವಾಮಿ ದೇವಾಲಯ ಜೀರ್ಣೋದ್ಧಾರವಾಗದೇ ಅನಾಥ!
ಬೇಲೂರು ದೇವಾಲಯದಲ್ಲಿರಬೇಕಾಗಿದ್ದ ಶ್ರೀ ವರದ ರಾಜಸ್ವಾಮಿಯ ಅದ್ಭುತ ಶಿಲ್ಪಕಲಾ ವೈಭವದ ಮೂರ್ತಿಯು ಕೊಂಡಜ್ಜಿ ದೇವಾಲಯದಲ್ಲಿದೆ. ಅಪರೂಪದ ಕಪ್ಪು ಕಲ್ಲಿನಿಂದ ಕೆತ್ತಿದ 17 ಅಡಿ ಎತ್ತರದ ಮತ್ತು ಏಕಶಿಲೆಯ ವಿಗ್ರಹಕ್ಕೆ ಹೆಸರುವಾಸಿಯಾದ ಈ ದೇವಾಲಯವು ರಾಜ್ಯದಾದ್ಯಂತ ಅನೇಕ ಭಕ್ತರನ್ನು ಹಾಗೂ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.