ದೇಶಕೇರಳದ ಆದಿಮಾಲಿಯಲ್ಲಿ ಕಮರಿಗೆ ಬಿದ್ದ ಕಾಲೇಜು ವಿದ್ಯಾರ್ಥಿಗಳ ಪ್ರವಾಸಿ ಬಸ್: ಓರ್ವ ಸಾವು, 44 ಮಂದಿಗೆ ಗಾಯ
ಕೇರಳ ರಾಜ್ಯದ ಇಡುಕ್ಕಿ ಜಿಲ್ಲೆಯ ಆದಿಮಾಲಿ ಬಳಿ ಭಾನುವಾರ ನಸುಕಿನ ಜಾವ ಪ್ರವಾಸಿ ಬಸ್ ಕಮರಿಗೆ ಬಿದ್ದು ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದು, ಸಿಬ್ಬಂದಿ ಸೇರಿದಂತೆ 44 ಮಂದಿ ಗಾಯಗೊಂಡಿದ್ದಾರೆ. ಬಸ್ ಮಲಪ್ಪುರಂನ ತಿರೂರ್ನಲ್ಲಿರುವ ಪ್ರಾದೇಶಿಕ ಕೈಗಾರಿಕಾ ತರಬೇತಿ ಸಂಸ್ಥೆಯ (ITI) ವಿದ್ಯಾರ್ಥಿಗಳನ್ನು ವಿಹಾರಕ್ಕೆ ಕರೆದೊಯ್ದು ಹಿಂತಿರುಗುತ್ತಿತ್ತು.