ರಾಜ್ಯಮುಸ್ಲಿಂ ಸಂಸ್ಥೆಗೂ ಈದ್ಗಾ ಮೈದಾನಕ್ಕೂ ಸಂಬಂಧವಿಲ್ಲ, ಮೂಲ ಮಾಲೀಕರು ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಬಹುದು: ಬಿಬಿಎಂಪಿ
ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಇದೀಗ ಬಹುದೊಡ್ಡ ತಿರುವು ಪಡೆದಿದ್ದು, ಮಾಲೀಕತ್ವ ತನ್ನದೇ ಎಂದು ಹೇಳಿಕೊಂಡಿದ್ದ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಗೂ ವಿವಾದಿತ ಜಾಗಕ್ಕೂ ಯಾವುದೇ ಸಂಬಂಧವಿಲ್ಲ.. ಮೂಲ ದಾಖಲೆಗಳಿಗಾಗಿ ಮಾಲೀಕರು ಅರ್ಜಿ ಸಲ್ಲಿಸಬಹುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸ್ಪಷ್ಟನೆ ನೀಡಿದೆ.