ಕೇಂದ್ರ ಬಜೆಟ್ 2021

ಕೇಂದ್ರ ಬಜೆಟ್ 2021-2022: ಯಾವ ಕ್ಷೇತ್ರಕ್ಕೆ ಎಷ್ಟು ಅನುದಾನ?
ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ ಮಾಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಆರೋಗ್ಯ, ಕೃಷಿ ಹಾಗೂ ಮೂಲಭೂತ ಸೌಕರ್ಯ ಕ್ಷೇತ್ರಗಳಿಗೆ ಬಂಪರ್ ಅನುದಾನವನ್ನು ಘೋಷಣೆ ಮಾಡಿದ್ದಾರೆ.

2021-22ರ ಬಜೆಟ್ ನಿಂದ ಚಿತ್ರೋದ್ಯಮಕ್ಕೆ ನಿರಾಸೆ: ನಿರ್ಮಾಪಕ ಟಿಪಿ ಅಗರವಾಲ್
ಕೇಂದ್ರ ಮುಂಗಡ ಪತ್ರ 2021-22ಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಲ್ಲ ವರ್ಗದ ಆಶೋತ್ತರಗಳನ್ನು ಈಡೇರಿಸುವ ಭರವಸೆ ನೀಡಿದೆ, ಎಲ್ಲ ವಲಯಗಳಿಗೂ ಆದ್ಯತೆ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದಾರೆ.

ಕೊರೋನಾ ಎಫೆಕ್ಟ್: ಕ್ರೀಡಾ ಬಜೆಟ್ ನಲ್ಲಿ 230.78 ಕೋಟಿ ರೂ. ಕಡಿತ, ಖೇಲೋ ಇಂಡಿಯಾಗೆ ತೀವ್ರ ಹೊಡೆತ!
ಕೊರೋನಾ ಸಾಂಕ್ರಾಮಿಕ ರೋಗ ಪರಿಣಾಮ ಕ್ರೀಡಾ ಬಜೆಟ್ ನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 230 ಕೋಟಿ ರೂಪಾಯಿ ಕಡಿತ ಮಾಡಲಾಗಿದೆ.

ಕೇಂದ್ರ ಬಜೆಟ್ 2021-2022: ಬೆಂಗಳೂರು ನಮ್ಮ ಮೆಟ್ರೋಗೆ ರೂ.14,788 ಕೋಟಿ ಅನುದಾನ
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸಕ್ತ ಸಾಲಿನ ಆಯವ್ಯಯ ಮಂಡನೆಯಲ್ಲಿ ಬೆಂಗಳೂರು ಮೆಟ್ರೋಗೆ ರೂ.14,788 ಕೋಟಿ ಅನುದಾನ ಮೀಸಲಿಟ್ಟಿರುವುದಾಗಿ ತಿಳಿಸಿದ್ದಾರೆ.

