ಕೇಂದ್ರ ಬಜೆಟ್ 2017-18

ಅಲ್ಪಸಂಖ್ಯಾತ ಇಲಾಖೆ ಅನುದಾನ ಶೇ.9.6 ರಷ್ಟು ಹೆಚ್ಚಳ
2017-18 ನೇ ಸಾಲಿನ ಬಜೆಟ್ ನಲ್ಲಿ ಅಲ್ಪಸಂಖ್ಯಾತ ಇಲಾಖೆಗೆ ಕೇಂದ್ರ ಸರ್ಕಾರ ಕಳೆದ ಬಾರಿಗಿಂತ ಶೇ.9.6 ರಷ್ಟು ಹೆಚ್ಚು (4195 ಕೋಟಿ ರೂ.) ಅನುದಾನ ಘೋಷಿಸಲಾಗಿದೆ.

ರಾಜಕೀಯ ಪಕ್ಷಗಳಿಗೆ ಬಜೆಟ್ ಶಾಕ್: ನಗದು ದೇಣಿಗೆ ಮಿತಿ 20 ಸಾವಿರದಿಂದ 2 ಸಾವಿರಕ್ಕೆ ಇಳಿಕೆ!
ಕೇಂದ್ರ ಸರ್ಕಾರ 2017-18 ನೇ ಸಾಲಿನ ಬಜೆಟ್ ನಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ರಾಜಕೀಯ ಪಕ್ಷಗಳಿಗೆ ನಗದು ರೂಪದಲ್ಲಿ ನೀಡುವ ದೇಣಿಗೆಯ ಗರಿಷ್ಠ ಮೊತ್ತವನ್ನು 20 ಸಾವಿರದಿಂದ 2 ಸಾವಿರಕ್ಕೆ ಇಳಿಸಿದ್ದಾರೆ.

ವಿತ್ತ ಸಚಿವರಿಗೆ ವಿಚಿತ್ರ ಸವಾಲು: ಪರೋಕ್ಷ ತೆರಿಗೆ ನಿಖರ ಅಂಕಿ-ಅಂಶಗಳೇ ಇಲ್ಲ!
2017-18 ನೇ ಸಾಲಿನ ಬಜೆಟ್ ಮಂಡನೆಗೆ ಸಿದ್ಧಗೊಂಡಿರುವ ವಿತ್ತ ಸಚಿವ ಅರುಣ್ ಜೇಟ್ಲಿಗೆ ವಿಚಿತ್ರ ಸವಾಲೊಂದು ಎದುರಾಗಿದೆ. ಜಿಎಸ್ ಟಿ ಕಾರಣದಿಂದಾಗಿ ಈ ಸವಾಲು ಎದುರಾಗಿದ್ದು, ಪರೋಕ್ಷ ತೆರಿಗೆಯ ಕುರಿತು ನಿಖರ ಅಂಕಿ-ಅಂಶಗಳಿಲ್ಲದೇ ಬಜೆಟ್ ನ್ನು ಮಂಡಿಸಬೇಕಾಗಿದೆ.

ಬಜೆಟ್ ಮುಂದೂಡಲು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ಕೇಂದ್ರ ಸರ್ಕಾರದ ಬಜೆಟ್ ನ್ನು ಮುಂದೂಡುವಂತೆ ನಿರ್ದೇಶನ ನೀಡಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಜ.23 ರಂದು ವಜಾಗೊಳಿಸಿದೆ.

