ರಾಜ್ಯಕೆ-ಸೆಟ್ ಆಪ್ಷನ್ ಎಂಟ್ರಿ: ಮೊದಲ ದಿನವೇ 30,000 ಮಂದಿ ನೋಂದಣಿ!
ವೈದ್ಯಕೀಯ, ಎಂಜಿನಿಯರಿಂಗ್ ಸೇರಿದಂತೆ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಸಿಇಟಿ ಹಾಗೂ ನೀಟ್ ಅಭ್ಯರ್ಥಿಗಳು ಆದ್ಯತೆ ಅನುಸಾರ ಕಾಲೇಜು, ಕೋರ್ಸುಗಳ ಆಯ್ಕೆ ದಾಖಲಿಸುವ ಪ್ರಕ್ರಿಯೆ (ಆಪ್ಷನ್ ಎಂಟ್ರಿ) ಭಾನುವಾರದಿಂದ ಆರಂಭಗೊಂಡಿದ್ದು, ಮೊದಲ ದಿನವೇ 30 ಸಾವಿರ ಅಭ್ಯರ್ಥಿಗಳು 5 ಲಕ್ಷ ಆಯ್ಕೆಗಳನ್ನು ದಾಖಲಿಸಿದ್ದಾರೆ.