ರಾಜಕೀಯಉಪಚುನಾವಣೆಗೆ ಮುನ್ನ ಕಾಂಗ್ರೆಸ್ ಗೆ ಶಾಕ್! ರಾಜ್ಯಸಭಾ ಸ್ಥಾನಕ್ಕೆ ಕೆಸಿ ರಾಮಮೂರ್ತಿ ರಾಜೀನಾಮೆ
ರಾಜ್ಯದಲ್ಲಿ ಸಧ್ಯದಲ್ಲೇ ಉಪಚುನಾವಣೆ ಘೋಷಣೆಯಾಗಲು ಕೆಲ ದಿನಗಳಿರುವಂತೇ ಕಾಂಗ್ರೆಸ್ ಗೆ ಇನ್ನೊಮ್ಮೆ ಆಘಾತವಾಗಿದೆ. ಕಾಂಗ್ರೆಸ್ ನ ರಾಜ್ಯಸಭಾ ಸದಸ್ಯತ್ವಕ್ಕೆ ಕೆ.ಸಿ.ರಾಮಮೂರ್ತಿ ರಾಜೀನಾಮೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಅವರು ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ಸಹ ರಾಜೀನಾಮೆ ಸಲ್ಲಿಸಿದ್ದಾರೆ.