ಕ್ರಿಕೆಟ್ಸಿಕ್ಸ್ ಬಾರಿಸಿ ತಮ್ಮದೇ ಕಾರಿನ ಗ್ಲಾಸ್ ಒಡೆದು ಹಾಕಿದ ಐರ್ಲೆಂಡ್ ಕ್ರಿಕೆಟಿಗ ಕೆವಿನ್ ಓಬ್ರಿಯನ್
ಐರ್ಲೆಂಡ್ ತಂಡದ ಬ್ಯಾಟ್ಸ್ಮನ್ ಕೆವಿನ್ ಓಬ್ರಿಯನ್ ಸಿಕ್ಸರ್ ಸಿಡಿಸುವುದರಲ್ಲಿ ಎಂದಿಗೂ ಹಿಂದೆ ಬಿದ್ದವರಲ್ಲ. ಹಲವು ಬಾರಿ ತಮ್ಮ ಸ್ಫೋಟಕ ಬ್ಯಾಟಿಂಗ್ನಲ್ಲಿ ಸಿಕ್ಸರ್ಗಳನ್ನು ಸಿಡಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಆದರೆ, ಪಂದ್ಯವೊಂದರಲ್ಲಿ ಸಿಡಿಸಿದ ಸಿಕ್ಸರ್ನಿಂದ ಚೆಂಡು ತಮ್ಮದೇ ಕಾರಿನ ಗಾಜು ಹೊಡೆದಿದ್ದರಿಂದ ಅವರು ಬೇಸರವಾಗಿದ್ದಾರೆ.