ದೇಶಕೊಲ್ಕತಾ: ಆಸ್ಪತ್ರೆಯ ಏಳನೇ ಅಂತಸ್ತಿನಿಂದ ಕೆಳಗೆ ಬಿದ್ದ ವ್ಯಕ್ತಿ, ಗಂಭೀರ ಗಾಯ
ನಗರದ ಹೃದಯ ಭಾಗದಲ್ಲಿರುವ ಮುಲಿಕ್ ಬಜಾರ್ ನ ಖಾಸಗಿ ಆಸ್ಪತ್ರೆಯೊಂದರ ಬೆಡ್ ನಿಂದ ಪರಾರಿಯಾಗಿದ್ದ ಪುರುಷ ರೋಗಿಯೊಬ್ಬ ಆಸ್ಪತ್ರೆಯ ಏಳನೇ ಅಂತಸ್ತಿನ ಮೂಲೆಯೊಂದರಲ್ಲಿ ಸುಮಾರು ಎರಡು ಗಂಟೆಗಳ ಕಾಲ ಕುಳಿತಿದ್ದು ನಂತರ ಕೆಳಗೆ ಬಿದ್ದು, ಗಂಭೀರವಾಗಿ ಗಾಯಗೊಂಡಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.