ಕೆಫೆ ಕಾಫಿ ಡೇ

ಸಿದ್ದರಾಮಯ್ಯ ರಾಜಿನಾಮೆ; ಡಿ.ಕೆ ಶಿವಕುಮಾರ್ ಎಂಟ್ರಿ ಬೆನ್ನಲ್ಲೇ ಈ ಕಂಪನಿ ಷೇರುಗಳು ಶೇಕಡಾ 20ರಷ್ಟು ಏರಿಕೆ!
ಶುಕ್ರವಾರ ಷೇರು ಮಾರುಕಟ್ಟೆ ವಿಚಿತ್ರ ಘಟನೆಗೆ ಸಾಕ್ಷಿಯಾಯಿತು. ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಿದ್ದಂತೆ CCD ಷೇರುಗಳು ಇದ್ದಕ್ಕಿದ್ದಂತೆ ಏರಿಕೆ ಕಂಡಿವೆ.

ಆರ್ಥಿಕ ಸಂಕಷ್ಟ: ಸಿದ್ದಾರ್ಥ್ ಒಡೆತನದ ಡಾರ್ಕ್ ಫಾರೆಸ್ಟ್ ಫರ್ನಿಚರ್ ಕಂಪನಿ ಬಂದ್
ಪ್ರಖ್ಯಾತ “ಕಾಫಿ ಡೇ’ಯ ಅಂಗಸಂಸ್ಥೆ ಡಾರ್ಕ್ ಫಾರೆಸ್ಟ್ ಫರ್ನಿಚರ್ (ಡ್ಯಾಪ್ಕೋ) ಕಂಪನಿಗೆ ಸೋಮವಾರ ಶಾಶ್ವತವಾಗಿ ಬೀಗ ಹಾಕಲಾಗಿದೆ. “ಕಾಫಿ ಡೇ’ ಸಂಸ್ಥಾಪಕ ಸಿದ್ದಾರ್ಥ್ ಹೆಗಡೆ ಸಾವಿನ ನಂತರ ಸಂಸ್ಥೆ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಇದರಿಂದಾಗಿ ಕಾರ್ಮಿಕರು ಪರದಾಡುವಂತಾಗಿದೆ.

ಸಿಬಿಐ ನಿವೃತ್ತ ಅಧಿಕಾರಿಯಿಂದ ಸಿದ್ದಾರ್ಥ ಕೊನೇ ಪತ್ರದ ತನಿಖೆ
ಕೆಫೆ ಕಾಫಿ ಡೇ ಮಾಲೀಕ ವಿ. ಸಿ. ಸಿದ್ದಾರ್ಥ ಜುಲೈ 27 ರಂದು ಕಂಪನಿಯ ನಿರ್ದೇಶಕರಿಗೆ ಬರೆದಿದ್ದರು ಎನ್ನಲಾದ ಪತ್ರದ ಬಗ್ಗೆ ಸಿಬಿಐ ಮಾಜಿ ಅಧಿಕಾರಿ ಅಶೋಕ್ ಕುಮಾರ್ ಮಲ್ಹೋತ್ರಾ ತನಿಖೆ ನಡೆಸಲಿದ್ದಾರೆ ಎಂದು ಸಿಸಿಡಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿದ್ಧಾರ್ಥ್ ಸಾವು: ಪೊಲೀಸ್ ತನಿಖೆ ಚುರುಕು, ಐಟಿ ಕಚೇರಿಯಲ್ಲೂ ತನಿಖೆ
ಕೆಫೆ ಕಾಫಿ ಡೇ ಮಾಲೀಕ ವಿಜಿ ಸಿದ್ಧಾರ್ಥ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಕಚೇರಿಗೂ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಮುಂಬೈ ಮೂಲದ ಫೈನಾನ್ಸ್ ಕಂಪನಿಯ ಕಿರುಕುಳವೇ ಸಿದ್ಧಾರ್ಥ್ ಸಾವಿಗೆ ಕಾರಣ?
ಕೆಫೆ ಕಾಫಿ ಡೇ ಸಂಸ್ಥೆಯ ಮಾಲೀಕ ವಿಜಿ ಸಿದ್ಧಾರ್ಥ್ ಅವರ ಅಕಾಲಿಕ ಸಾವು ಇಡೀ ದೇಶದ ಉದ್ಯಮ ವಲಯದ ಜಂಗಾಬಲವನ್ನೇ ನಡುಗಿಸಿದ್ದು, ಇದೀಗ ವಿಜಿ ಸಿದ್ಧಾರ್ಥ್ ಸಾವಿಗೆ ಹೊಸ ಟ್ವಿಸ್ಟ್ ವೊಂದು ದೊರೆತಿದೆ.

ಸಿದ್ಧಾರ್ಥ್ ಸಾವು: 20 ನಿಮಿಷದ ಪ್ರಯಾಣಕ್ಕೆ ಒಂದೂವರೆ ಗಂಟೆ ಹಿಡಿದಿದ್ದೇಕೆ? ಮಾರ್ಗ ಮಧ್ಯೆ ಏನಾಯ್ತು?
ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಸಾವಿನ ಬೆನ್ನಲ್ಲೇ ಹಲವು ಅನುಮಾನಗಳು ಹುಟ್ಟಿಕೊಳ್ಳುತ್ತಿದ್ದು, ಏತನ್ಮಧ್ಯೆ ಸಿದ್ಧಾರ್ಥ್ ಪ್ರಯಾಣಿಸುತ್ತಿದ್ದ ಕಾರು ಕೂಡ ಇದೀಗ ಸುದ್ದಿಗೆ ಗ್ರಾಸವಾಗಿದೆ.

ಸಾವಿಗೂ 2 ದಿನ ಮುಂಚಿತವಾಗಿಯೇ ಡೆತ್ ನೋಟ್ ಬರೆದಿದ್ದ ಸಿದ್ಧಾರ್ಥ್!
ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರ ಸಾವು ಹಲವು ಪ್ರಶ್ನೆಗಳನ್ನು ಸೃಷ್ಟಿ ಮಾಡಿದ್ದು, ಸಿದ್ಧಾರ್ಥ್ ಸಾವಿಗೂ 2 ಮುನ್ನವೇ ತಮ್ಮ ಡೆತ್ ನೋಟ್ ಬರೆದಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

ವಿಜಿ ಸಿದ್ದಾರ್ಥ ಸಾವು: ಕೆಫೆ ಕಾಫಿ ಡೇ ಷೇರು ಭಾರೀ ಕುಸಿತ; ಬರೋಬ್ಬರಿ 1.724 ಕೋಟಿ ನಷ್ಟ!
ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ದಾರ್ಥ ಅವರ ನಿಧನ ಹಿನ್ನೆಲೆಯಲ್ಲಿ ಕೆಫೆ ಕಾಫಿ ಡೇ ಷೇರು ಪ್ರಪಾತಕ್ಕೆ ಕುಸಿದಿದ್ದು ಬರೋಬ್ಬರಿ 1.724 ಕೋಟಿ ರುಪಾಯಿ ನಷ್ಟವಾಗಿದೆ.

ಮಾಲೀಕ ಸಿದ್ಧಾರ್ಥ್ ಸಾವು; ಇಂದು ಕಾಫಿ ಡೇ ಕಾರ್ಯ ಸ್ಥಗಿತ, ಪ್ರಧಾನ ಕಚೇರಿಯಲ್ಲಿ ನಿರ್ದೇಶಕರ ಮಹತ್ವದ ಸಭೆ!
ಮಾಲೀಕ ಸಿದ್ಧಾರ್ಥ್ ಸಾವಿನ ಬೆನ್ನಲ್ಲೇ ಸಿದ್ಧಾರ್ಥ್ ಸ್ಮರಣಾರ್ಥ ಇಂದು ದೇಶದ ಎಲ್ಲ ಕಾಫಿ ಡೇ ಔಟ್ ಲೆಟ್ ಗಳಿಗೆ ರಜೆ ಘೋಷಣೆ ಮಾಡಲಾಗಿದೆ.

