ಕೆಪಿಎಸ್ ಸಿ ಪರೀಕ್ಷೆ

KPSC ಮತ್ತೊಂದು ಮಹಾಲೋಪ ಬಯಲು: ರಾಜ್ಯ ಸರ್ಕಾರ ವಿರುದ್ಧ ಬಿ.ವೈ ವಿಜಯೇಂದ್ರ ಆಕ್ರೋಶ
KPSC ಪೂರ್ವಭಾವಿ ಪರೀಕ್ಷೆ, ಮರುಪರೀಕ್ಷೆ, ಮುಖ್ಯ ಪರೀಕ್ಷೆ, ಈ ಮೂರು ಪರೀಕ್ಷೆಗಳಲ್ಲೂ ಆಗಿರುವ ಭಾಷಾಂತರ ಲೋಪದಿಂದ ಈಗಾಗಲೇ ಲಕ್ಷಾಂತರ ಕನ್ನಡ ಮಾಧ್ಯಮ ಅಭ್ಯರ್ಥಿಗಳು ಅನ್ಯಾಯಕ್ಕೊಳಗಾಗಿದ್ದಾರೆ.

KPSC exam: ಒಎಂಆರ್ ಶೀಟ್, ಹಾಲ್ ಟಿಕೆಟ್ ಸಂಖ್ಯೆ ಬೇರೆಬೇರೆ; ಅಭ್ಯರ್ಥಿಗಳ ಪ್ರತಿಭಟನೆ
ವಿಜಯಪುರ ಜಿಲ್ಲೆಯ 32 ಕೇಂದ್ರಗಳಲ್ಲಿ 12,741 ಅಭ್ಯರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದರು.

ಓಮಿಕ್ರಾನ್ ಆತಂಕ: ಮನೆಯಿಂದ ನೂರಾರು ಮೈಲು ದೂರದಲ್ಲಿ ಪರೀಕ್ಷೆ ಬರೆಯಬೇಕಾದ ಸಂದಿಗ್ಧತೆಯಲ್ಲಿ ಕೆಪಿಎಸ್ಸಿ ಆಕಾಂಕ್ಷಿಗಳು!
ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಮತ್ತು ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಸುಮಾರು 60 ಸಾವಿರ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಇದೇ ತಿಂಗಳ 13 ಮತ್ತು 14ರಂದು ಎರಡು ದಿನ ನಡೆಯುವ ಕೆಪಿಎಸ್ ಸಿ ಪರೀಕ್ಷೆ ಬರೆಯಲು ತಮ್ಮ ಊರಿಂದ 500-600 ಕಿಲೋ ಮೀಟರ್ ದೂರದ ಊರಿಗೆ ಹೋಗಿ ಪರೀಕ್ಷೆ ಬರೆಯಬೇಕು. ಬಹುತೇಕ ಅಭ್ಯರ್ಥಿಗಳಿಗೆ ತಮ್ಮ ಊರಿಂದ ಪರವೂರಿನಲ್ಲಿ ಪರೀಕ್ಷ

ಕೆಪಿಎಸ್ ಸಿ ಪರೀಕ್ಷೆ ಮುಂದೂಡುವಂತೆ ಯಡಿಯೂರಪ್ಪಗೆ ಪ್ರಿಯಾಂಕ್ ಖರ್ಗೆ ಪತ್ರ
ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಸಂದರ್ಭದಲ್ಲಿ ಕೆಪಿಎಸ್‍ಸಿ 2017-18 ನೇ ಸಾಲಿನ 106 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಸಲು ಮುಂದಾಗಿರುವುದರಿಂದ ಅಭ್ಯರ್ಥಿಗಳು ಆತಂಕಕ್ಕೆ ಒಳಗಾಗಿದ್ದು, ಸರ್ಕಾರ ಪರೀಕ್ಷೆಯನ್ನು ಮುಂದೂಡಬೇಕೆಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆಗ್ರಹಿಸಿದ್ದಾರೆ.

ಕರ್ನಾಟಕ ಲೋಕ ಸೇವಾ ಆಯೋಗದ ಪರೀಕ್ಷೆಗಳ ದಿನಾಂಕ ಪ್ರಕಟ!
ಕರ್ನಾಟಕ ಲೋಕ ಸೇವಾ ಆಯೋಗವು ವಿವಿಧ ಇಲಾಖೆಯ ಹುದ್ದೆಗಳ ಪೂರ್ವಭಾವಿ ಹಾಗೂ ಇಲಾಖಾ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರಗಳನ್ನು ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.

