ಕೆಎಸ್ ಆರ್ ಟಿಸಿ ಬಸ್

ರಾಜ್ಯದ ಜನತೆಗೆ ಶೀಘ್ರದಲ್ಲೇ ಮತ್ತೊಂದು ಬೆಲೆ ಏರಿಕೆ ಶಾಕ್! ಬಸ್ ಪ್ರಯಾಣ ದರ ಏರಿಕೆ ಸಾಧ್ಯತೆ
ವಿಧಾನಪರಿಷತ್ ನಲ್ಲಿ ಸಾರಿಗೆ ಸಚಿವ ಬೈರತಿ ಸುರೇಶ್, ಗುರುವಾರ ಹೇಳಿಕೆ ನೀಡಿದ್ದು, ಬಸ್ ಪ್ರಯಾಣದ ಟಿಕೆಟ್ ದರ ಪರಿಷ್ಕರಣೆ ಮಾಡುವ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.

KSRTC ಬಸ್ಸಿನಲ್ಲಿ ಯುವತಿ ಜೊತೆ ಯುವಕನ ಅನುಚಿತ ವರ್ತನೆ: ಸಾರ್ವಜನಿಕರಿಂದ ಧರ್ಮದೇಟು!
ಮಧ್ಯರಾತ್ರಿ ಜರ್ನಿ ವೇಳೆಯಲ್ಲಿ ಚಳಿಯಲ್ಲಿ ಬೆಚ್ಚಗೆ ಮಾಡಿಕೊಳ್ಳುವ ಯತ್ನಿಸಿದ ಯುವಕನಿಗೆ ಚಪ್ಪಲಿಯಲ್ಲಿ ಹೊಡೆದು ಯುವತಿ, ಗ್ರಹಚಾರ ಬಿಡಿಸಿದ್ದಾಳೆ.

ಚಿತ್ರದುರ್ಗ: KSRTC ಬಸ್ ಪಲ್ಟಿ, 15 ಪ್ರಯಾಣಿಕರಿಗೆ ಗಾಯ; Video
ಚಾಲಕನ ನಿಯಂತ್ರಣ ತಪ್ಪಿದ ವಾಹನವು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಸ್ತೆಯ ಮೇಲೆ ಉರುಳಿ ಬಿದ್ದಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಹೆಗ್ಗರೆ ಬಳಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

ರಾಯಚೂರು: ನಾಯಿಗೆ ಡಿಕ್ಕಿ ತಪ್ಪಿಸಲು ಹೋಗಿ ಅಪಘಾತ: ಹೊಲಕ್ಕೆ ಉರುಳಿದ KSRTC ಬಸ್; ಹಲವರಿಗೆ ಗಾಯ
ಏಕಾಏಕಿ ಅಡ್ಡಬಂದ ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕ ಬಸ್ ಅನ್ನು ಎಡಕ್ಕೆ ತಿರುಗಿಸಿದ್ದಾನೆ. ಆಗ ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಜಮೀನಿಗೆ ಉರುಳಿದೆ.

ಕನಕಪುರ ರಸ್ತೆಯಲ್ಲಿ KSRTC ಬಸ್ ಪಲ್ಟಿ: ಎಲೆಕ್ಟ್ರಾನಿಕ್ ಸಿಟಿ PSI ನಾಗರಾಜ್ ಸೇರಿ ಇಬ್ಬರು ಸಾವು
ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಿಎಸ್‌ಐ ನಾಗರಾಜ್ ಹಾಗೂ ಮತ್ತೊಬ್ಬ ನಾಗರಿಕರು ಸಾವನ್ನಪ್ಪಿದ್ದಾರೆ. ಗಾಯಾಳುಗಳ ಪೈಕಿ ಒಬ್ಬರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಚಿಕ್ಕಮಗಳೂರು: ಮನೆ ಮೇಲೆ KSRTC ಬಸ್ ಬಿದ್ದು 30 ಮಂದಿಗೆ ಗಾಯ
ಬಸ್ ಡಿಕ್ಕಿ ಹೊಡೆದ ಮನೆಯ ನಿವಾಸಿ ಶಾಂತಾ ಕೂಡ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯ ನಿವಾಸಿಗಳು ಸಹಾಯ ಮಾಡಿದರು.ಅಪಘಾತಕ್ಕೆ ಅತಿವೇಗವೇ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ.

News headlines 24-02-2025 | "ಮಹಾ" ಪುಂಡಾಟಿಕೆ: KSRTC ಬಸ್ ಗಳಿಗೆ ಶಿವಸೇನೆ ಮಸಿ; ಬಿಜೆಪಿ ಕರೆ ನೀಡಿದ್ದ ಮೈಸೂರು ಚಲೋಗೆ ತಡೆ, ನಗರದಲ್ಲಿ ನಿಷೇಧಾಜ್ಞೆ; ಬೇಸಿಗೆ: ನೀರು ಪೋಲು ಮಾಡಿದರೆ ಭಾರಿ ದಂಡ!

ಚಾಮರಾಜನಗರ: ಚಾಲಕನಿಗೆ ಮೂರ್ಛೆ, ಮರಕ್ಕೆ KSRTC ಬಸ್ ಡಿಕ್ಕಿ, ಹಲವರಿಗೆ ಗಾಯ
ಬಸ್‌ನಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹೊಸಪೇಟೆ: ಚಿನ್ನದ ಸರ ಕಳೆದುಕೊಂಡ ಮಹಿಳೆ, KSRTC ಬಸ್ ನಲ್ಲಿದ್ದ 73 ಪ್ರಯಾಣಿಕರ ತಪಾಸಣೆ!
ಬಸ್ಸಿನಲ್ಲಿ ಯಾರೋ ತನ್ನ ಚಿನ್ನದ ಸರ ಎಗರಿಸಿದ್ದು, ಪೊಲೀಸ್ ಠಾಣೆ ಬಳಿಗೆ ಬಸ್ ಚಲಾಯಿಸಿಕೊಂಡು ಹೋಗುವಂತೆ ಮಹಿಳೆ ಚಾಲಕನಿಗೆ ಹೇಳಿದ್ದಾರೆ. ಮಹಿಳೆ ಹೊಸಪೇಟೆಯಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.

